ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲೋಚನ ಶಿರೋಡಕರ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 8ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿರುವುದರ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಪ್ರಸ್ತುತ ದಿವೇಕರ ವಾಣಿಜ್ಯ ಮಹಾವಿದ್ಯಾಲಯ ಎಂ.ಕಾಂ. ಪ್ರಥಮ ಸೆಮಿಸ್ಟರ್ ಓದುತ್ತಿರುವ ಇವಳು 2022ನೇ ಸಾಲಿನ ಬಿ.ಕಾಂ ಸ್ನಾತಕ ಪದವಿಯ ರ್ಯಾಂಕ್ ಪಟ್ಟಿಯನ್ನು ಕರ್ನಾಟಕ ವಿಶ್ವ ವಿದ್ಯಾಲಯ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಲೋಚನ ಶಿರೋಡಕರ ಒಟ್ಟು 6 ಸೆಮಿಸ್ಟರ್‌ಗಳಲ್ಲಿ 3700 ಅಂಕಗಳಿಗೆ 3566 (96.38)ಅಂಕಗಳನ್ನು ಪಡೆಯುವ ಮೂಲಕ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ 8ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿರುತ್ತಾಳೆ. ಅಭಿನಂದನಾ ಕಾರ್ಯಕ್ರಮದ ಸಂದರ್ಭದಲ್ಲಿ ಲೋಚನ ಶಿರೋಡಕರ ಅವರ ತಂದೆ ಸುರಜ ಶಿರೋಡಕರ ಹಾಗೂ ತಾಯಿ ಸುನೀತಾ ಶಿರೋಡಕರ ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಾಚಾರ್ಯ ಡಾ.ಕೇಶವ ಕೆ.ಜಿ. ಈಕೆಯ ಸಾಧನೆ ಕಾಲೇಜಿಗೆ ಗೌರವವನ್ನು ತಂದುಕೊಟ್ಟಿದೆ. ಅಲ್ಲದೆ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾಳೆ. ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಅಭಿನಂದನೆ ಸೂಚಿಸಿದರು. ಡಾ.ಬಿ.ಆರ್ ತೊಳೆ, ಸಂಧ್ಯಾ ಕದಂ, ಪೂಜಾ ನಾಯ್ಕ, ಶುಭಂ ತಳೇಕರ, ಡಾ.ಹರೀಶ ಕಾಮತ್, ಉಪನ್ಯಾಸಕ ವರ್ಗ ಉಪಸ್ಥಿತರಿದ್ದು ಅಭಿನಂದನೆಯ ಶುಭ ಹಾರೈಕೆಯನ್ನು ಸಲ್ಲಿಸಿದರು. ಗ್ರಂಥಪಾಲಕ ಸುರೇಶ ಗುಡಿಮನಿ ವಂದಿಸಿದರು. ಐಕ್ಯೂಎಸಿ ಸಂಚಾಲಕ ಸುಧೀರ ಕದಂ ನಿರೂಪಿಸಿದರು.