Slide
Slide
Slide
previous arrow
next arrow

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮುಕ್ತಾಯ

300x250 AD

ದಾಂಡೇಲಿ: ನಗರದ ಡಿ.ಎಫ್.ಎ. ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಹಳೇ ದಾಂಡೇಲಿ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ತಾಲ್ಲೂಕಿನ ಎಲ್ಲ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಡಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟವು ಮಂಗಳವಾರ ಸಂಜೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚುವಂತಹ ಪ್ರತಿಭೆಗಳಿವೆ. ಆ ನಿಟ್ಟಿನಲ್ಲಿ ಇನ್ನಷ್ಟು ಶ್ರಮಸಾಧನೆ ಮಾಡಲಿ ಎಂದರು. ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಅವರು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು ಹಳೇ ದಾಂಡೇಲಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ನಾಗರೇಖಾ ಗಾಂವಕರ ಅವರು ಮಾತನಾಡಿ ಮಕ್ಕಳಲ್ಲಿ ಕ್ರೀಡಾ ಮನೋಭಾವ ಅವರ ಸಾಧನೆಗೆ ಮೆಟ್ಟಿಲು. ಈ ಕ್ರೀಡಾಕೂಟ ಮನೋವಿಕಾಸಕ್ಕೆ ನಾಂದಿ. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಾಬಾ ಮುಲ್ಲಾ,ಉದ್ಯಮಿಗಳಾದ ವಿಷ್ಟ್ಣುಮೂರ್ತಿ ರಾವ್, ಕನ್ಯಾ ವಿದ್ಯಾಲಯದ ಪ್ರಾಚಾರ್ಯ ಹನುಮಂತ ಕುಂಬಾರ, ಬಂಗೂರುನಗರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಆಶಾಲತಾ ಜೈನ್, ದೈಹಿಕ ಶಿಕ್ಷಕರಾದ ಪ್ರಕಾಶ ಮೆಹ್ತಾ, ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಸುರೇಶ ನಾಯ್ಕ, ಡೇವಿಡ್ ದಾನಂ, ಡಿ.ಎಸ್.ಮುಲ್ಲಾ, ಪಿ.ಆರ್.ಬಣದೂರಕರ, ಸಮದ್, ಸಾಧೀಕ ಬೀಡಿ, ಎಚ್.ಎಸ್. ಉದ್ದಂಡಿ, ಶಶಿರೇಖಾ ಕನ್ಯಾಡಿ ಮೊದಲಾದವರು ಕ್ರೀಡಾಕೂಟಕ್ಕೆ ಸಹಕರಿಸಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಪ್ರವೀಣಕುಮಾರ ಸುಲಾಖೆ,ಪ್ರಶಾಂತ ಜಾಧವ, ಶಶಿಕಲಾ ಬನ್ನಿಗೋಳ, ಉಷಾ ಸಲಗಾವಂಕರ, ಸುಜಾತಾ ನಾಯ್ಕ, ಗೌರಿ ಚಲವಾದಿ, ರಾಧಿಕಾ ಚೊಪಡೆ, ಸುಮಂಗಲಾ ನಾಯ್ಕ, ಪ್ರವೀಣ ಕಜ್ಜರಿ, ಕಾಲೇಜಿನ ಕ್ರೀಡಾ ಸಂಚಾಲಕರಾದ ಅನಿಲ ರೇಗೋ ಹಾಗೂ ವಿದ್ಯಾರ್ಥಿ ಸ್ಯಾಂಡಿ ಇದ್ದರು. ಉಪನ್ಯಾಸಕ ಪ್ರಶಾಂತ ಜಾಧವ್ ಕಾರ್ಯಕ್ರಮ ನಿರೂಪಿಸಿದರು. ರಾಧಿಕಾ ಚೊಪಡೆ ವಂದಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಹಾಗೂ ಉಪನ್ಯಾಸಕರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಬಂಗೂನಗರ ಪದವಿ ಪೂರ್ವ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿಯೊಂದಿಗೆ ಹಾಗೂ ಹಳೆದಾಂಡೇಲಿ ಪದವಿ ಪೂರ್ವ ಕಾಲೇಜು ಹೆಚ್ಚು ಸ್ಥಾನಗಳನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top