• Slide
    Slide
    Slide
    previous arrow
    next arrow
  • ಮಕ್ಕಳ ಕ್ರೀಡಾಕೂಟಕ್ಕೆ ಇಲ್ಲದ ಮೂಲಸೌಕರ್ಯ; ಪಾಲಕರ ಆಕ್ರೋಶ

    300x250 AD

    ಭಟ್ಕಳ: ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಶ್ಯಾಮಿಯಾನ ಸಹಿತ ಮೂಲಸೌಕರ್ಯ ಒದಗಿಸದೇ ಇರುವುದರಿಂದ ಕ್ರೀಡಾಕೂಟ ವೀಕ್ಷಣೆಗೆ ಬಂದ ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರದಂದು ನಡೆದಿದೆ.
    2 ದಿನಗಳ ಕಾಲ ನಡೆಯಲಿರುವ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಒಟ್ಟು 26 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಈ ಕ್ರೀಡಾ ಕೂಟದ ಉಸ್ತುವಾರಿಯನ್ನು ನವಾಯತ್ ಕಾಲೋನಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ವಹಿಸಿಕೊಂಡಿದೆ. ಆದರೆ ಕ್ರೀಡಾ ಕೂಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಸರಿಯಾದ ಮೂಲ ಭೂತ ಸೌಕರ್ಯ ಕಲ್ಪಿಸದೆ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
    ಮಂಗಳವಾರದಂದು ಬೆಳಿಗ್ಗೆಯಿಂದ ಆರಂಭಗೊಂಡ ಕ್ರೀಡಾಕೂಟವು ಉತ್ಸಾದಿತ ಶಾಲಾ ವಿದ್ಯಾರ್ಥಿಗಳಿಗೆ ಮಳೆಗಾಲವಾದರು ಸಹಿತ ವಿಪರೀತ ಬಿಸಿಲಿನ ತಾಪ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ತಂಗಲು ಶ್ಯಾಮಿಯಾನ ವ್ಯವಸ್ಥೆ ಕಲ್ಪಿಸಿಲ್ಲವಾಗಿದ್ದು, ಬಿಸಿಲಿಗೆ ಇಬ್ಬರು ವಿದ್ಯಾರ್ಥಿಗಳು ತಲೆಸುತ್ತಿ ಕುಸಿದು ಬಿದ್ದು ಓರ್ವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
    ಅತ್ತ ತಮ್ಮ ಮಕ್ಕಳ ಕ್ರೀಡಾಕೂಟ ನೋಡಲು ಬಂದ ವಿದ್ಯಾರ್ಥಿಗಳ ಪಾಲಕರು ಮಕ್ಕಳಿಗೆ ಕ್ರೀಡಾಕೂಟದಲ್ಲಿ ನೀಡದ ಮೂಲಭೂತ ಸೌಕರ್ಯಗಳ ಕೊರತೆಯ ವಿರುದ್ದವಾಗಿ ಆಯೋಜನೆ ಮಾಡಿದ ಶಾಲೆಯ ಹಾಗೂ ದೈಹಿಕ ಶಿಕ್ಷಣಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಸ್ಥಳದಿಂದಲೇ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೂ ಕರೆ ಮಾಡಿ ಕ್ರೀಡಾಕೂಟದ ಅವ್ಯವಸ್ಥೆಯ ಕುರಿತು ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ತಾಕೀತು ಮಾಡಲಾಯಿತು.
    ತಾಲೂಕಾ ಕ್ರೀಡಾಂಗಣದ ಸಮೀಪ ಇರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗಿದ್ದು, ಧ್ವನಿವರ್ಧಕ ಸೇರಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಅಲ್ಲೇ ಕಲ್ಪಿಸಿದ್ದಾರೆ. ಕಾರ್ಯಕ್ರಮ ಒಂದು ಕಡೆ ಕ್ರೀಡಾಕೂಟ ಇನ್ನೊಂದು ಕಡೆ ಎಂಬುವಂತೆ ವ್ಯವಸ್ಥೆ ಮಾಡಿರುವುದು ಪಾಲಕರ ಕೆಂಗಣ್ಣಿಗೆ ಕಾರಣವಾಯಿತು. ಆದರೆ ಶಾಲೆ ಹಾಗೂ ಕ್ರೀಡಾಂಗಣಕ್ಕೆ 300 ಮೀಟರ್ ದೂರವಿದ್ದು ಕ್ರೀಡಾಂಗಣದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಯಾವುದೇ ರೀತಿ ಶ್ಯಾಮಿಯಾನದ ವ್ಯವಸ್ಥೆ ಕಲ್ಪಿಸಿಲ್ಲವಾಗಿರುದಕ್ಕೆ ಆಯೋಜಿತ ಶಾಲೆಯ ಮುಖ್ಯೋಪಾಧ್ಯಾಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಅತ್ತ ಕುಸಿದು ಬಿದ್ದ ವಿದ್ಯಾರ್ಥಿಯನ್ನು ಗಮನಿಸಿದ ಉಳಿದ ವಿದ್ಯಾರ್ಥಿಗಳು ಬಿಸಿಲಿನಿಂದ ತಪ್ಪಿಸಿಕೊಳ್ಳಲು ತಾವು ತಂದಿರುವ ಛತ್ರಿಯನ್ನು ಹಿಡಿದು ಬಿಸಿಲಿನಿಂದ ರಕ್ಷಿಸಿಕೊಳ್ಳುತ್ತಿರುವ ದೃಶ್ಯ ಕೂಡ ಕ್ರೀಡಾಂಗಣದಲ್ಲಿ ಕಂಡುಬಂದವು.

    ಸ್ಥಳಕ್ಕೆ ಬಾರದ ಕ್ಷೇತ್ರ ಶಿಕ್ಷಣಾಧಿಕಾರಿ!
    ಕ್ರೀಡಾಂಗಣದಲ್ಲಿ ಒಂದುವರೆ ತಾಸಿಗೂ ಅಧಿಕ ಕಾಲ ನಡೆದ ಈ ಪ್ರಹಸದ ಬಗ್ಗೆ ಪಾಲಕರೇ ಖುದ್ದು ಕರೆ ಮಾಡಿ ತಿಳಿಸಿದರು ಸಹ ಸ್ಥಳಕ್ಕೆ ಬಾರದೇ ನಿರ್ಲಕ್ಷ ತೋರಿದ್ದಾರೆ. ಈ ಬಗ್ಗೆ ದೈಹಿಕ ಶಿಕ್ಷಣಾಧಿಕಾರಿಗೆ ಈ ಬಗ್ಗೆ ಮಾಧ್ಯಮದವರು ಮಾಹಿತಿ ಕೇಳಿದರೆ, ಮಾತು ಆಡದೆ ಸ್ಥಳದಿಂದ ತೆರಳಿದ ಘಟನೆ ಸಹ ನಡೆದಿರುವುದು ಶಾಲಾ ವಿದ್ಯಾರ್ಥಿಗಳ ಮೇಲೆ ಇವರುಗಳಿಗೆ ಇರುವ ಬೇಜವಾಬ್ದಾರಿ ಎದ್ದು ತೋರಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top