• Slide
    Slide
    Slide
    previous arrow
    next arrow
  • ಪ್ರಾಚಾರ್ಯರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

    300x250 AD

    ಶಿರಸಿ: ಪ್ರಾಚಾರ್ಯರ ವರ್ಗಾವಣೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪಾಲಕರು ಶಾಲೆಯ ಎದುರು ಉಪವಾಸ ಕುಳಿತು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕಲ್ಲಿ ಮುರಾರ್ಜಿ ಶಾಲೆಯಲ್ಲಿ ಮಂಗಳವಾರ ನಡೆಯಿತು.
    ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಹತ್ತು ವಷÀðಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವ ರಾಘವೇಂದ್ರ ನಾಯ್ಕ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಶಾಲೆಯ ಪ್ರಗತಿಯಲ್ಲಿ ರಾಘವೇಂದ್ರ ನಾಯ್ಕ ಗಣನೀಯ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಬಗ್ಗೆ ಅವರು ಕಾಳಜಿ ವಹಿಸಿದ್ದಾರೆ. ಅವರ ಏಕಾಏಕಿ ವರ್ಗಾವಣೆ ಮಾಡುತ್ತಿರುವುದು ಸೂಕ್ತವಲ್ಲ ಎಂಬುದು ವಿದ್ಯಾರ್ಥಿಗಳು ಮತ್ತು ಪಾಲಕರ ಅಭಿಪ್ರಾಯ. ಕಲ್ಲಿ ಶಾಲೆಯ ಆವರಣದಲ್ಲಿ ಗಾಂಧೀಜಿ ಪ್ರತಿಮೆ ಮುಂದಿಟ್ಟುಕೊAಡು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಊಟ ತಿಂಡಿ ಸಹ ನಡೆಸದೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಮಾಧ್ಯಮದೊಂದಿಗೆ ಮಾತನಾಡಿರುವ ವಿದ್ಯಾರ್ಥಿನಿ ರಾಜೇಶ್ವರಿ ನಾಯ್ಕ, ವೆಂಕಟ್ರಮಣ ಗೌಡ ಇತರರು, ಪ್ರಾಚಾರ್ಯ ರಾಘವೇಂದ್ರ ನಾಯ್ಕ ನಮ್ಮ ಕ್ರೀಡಾ ಚಟುವಟಿಕೆ, ವಿದ್ಯಾಭ್ಯಾಸಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಯಾವುದೇ ವಿಷಯದಲ್ಲಾದರೂ ನಮಗೆ ಅರ್ಥವಾಗದ ಪಾಠಗಳ ಬಗ್ಗೆ ವಿಶೇಷ ಮಾಹಿತಿ ನೀಡುತ್ತಿದ್ದಾರೆ. ನಾವು ಎಸ್‌ಎಸ್‌ಎಲ್‌ಸಿ ಓದುತ್ತಿದ್ದು ಈಗಾಗಲೇ ಅರ್ಧ ವರ್ಷ ಕಳೆದಿದೆ. ಒಂದೊಮ್ಮೆ ಈ ಹಂತದಲ್ಲಿ ಪ್ರಾಚಾರ್ಯರ ಬದಲಾವಣೆ ಆದರೆ ನಮ್ಮ ವಿಧ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಈಗ ನಿಯೋಜನೆ ಮಾಡಲಾಗಿರುವ ಪ್ರಾಚಾರ್ಯರ ಮೇಲೆ ಹಲವು ಆರೋಪಗಳಿವೆ. ಮುಖ್ಯವಾಗಿ ಈ ಹಿಂದೆ ಕೆಲಸ ಮಾಡಿರುವ ಸ್ಥಳದಲ್ಲಿ ಲೈಂಗಿಕ ಆರೋಪ ಸಹ ಇರುವುದು ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಪನಿಶ್ಮೆಂಟ್ ಟ್ರಾನಸ್ಫರ್ ಮಾಡಲಾಗಿದೆ. ಆ ಬಳಿಕ ಅವರನ್ನು ಕಾರವಾರಕ್ಕೆ ವರ್ಗ ಮಾಡಿದ್ದರೂ ತಮ್ಮ ಪ್ರಭಾವ ಬಳಸಿ ಕಲ್ಲಿ ಶಾಲೆಯ ಪ್ರಾಚಾರ್ಯ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top