• Slide
    Slide
    Slide
    previous arrow
    next arrow
  • ಕೊಂಕಣಿ ಅಧ್ಯಯನ ಪೀಠದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

    300x250 AD

    ಕಾರವಾರ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕೊಂಕಣಿ ಅಧ್ಯಯನ ಪೀಠದಲ್ಲಿ ರಾಷ್ಟ್ರೀ ಯಕೊಂಕಣಿ ಮಾನ್ಯತಾ ದಿನಾಚರಣೆ ಅಂಗವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಾಂಡೇಲಿಯ ಆರ್.ಪಿ.ನಾಯ್ಕ ಉದ್ಘಾಟನೆ ಮಾಡಿ ಉತ್ತರ ಕರ್ನಾಟಕ ಭಾಗದ ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗೆ ಎಂ.ಎ.ಕೊಂಕಣಿ ಕಲಿಯಲು ಹಾಗೂ ಸಂಶೋಧನೆ ಮಾಡಲು ಅನುಕೂಲವಾಗಲೆಂದು ಪೀಠವನ್ನು ಸ್ಥಾಪಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಸಹಿತ ಇದರ ಉಪಯೋಗ ಪಡೆಯಯಬೇಕೆಂದು ಹೇಳಿದರು.

    ಈ ಸಂದರ್ಭದಲ್ಲಿ ಕಾರವಾರದ ಹಿರಿಯ ಕೊಂಕಣಿ ಸಾಹಿತಿ ಹಾಗೂ ಕಲಾವಿದ ಡಾ.ವಸಂತ ಬಾಂದೇಕರರು ಕೊಂಕಣಿ ಮಾನ್ಯತಾ ದಿನಾಚರಣೆಯ ಹಿನ್ನಲೆ ಹಾಗೂ ಅದರ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಆಗಮಿಸಿದ ಡಾ. ಚಿತ್ರ ಪ್ರಭು, ಶ್ರೀ ರಮಾಕಾಂತ ಮಹಾಲೆ, ಶ್ರೀ ಕಿರಣಗಜಾನನ ಮಹಾಲೆ ಹಾಗೂ ಶ್ರೀ ಸುರೇಂದ್ರ ಪಾಲನಕರತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
    ಧಾರವಾಡದ `ಪ್ರಜ್ವಲ’ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಆಚರಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಸಂಘದ ಸಂಸ್ಥಾಪಕ ಸಂತೋಷ ಗಜಾನನ ಮಹಾಲೆಯವರು ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆ ಮಾಡಿದರೆ, ಅಧ್ಯಕ್ಷತೆ ವಹಿಸಿದ್ದ ಡಾ.ಉದಯ ರಾಯ್ಕರ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರು ಕೊಂಕಣಿ ಪೀಠ ಸ್ಥಾಪನೆ ಹಿನ್ನೆಲೆ ಹಾಗೂ ಮುಂದಿನ ಪ್ರಯೋಜನಗಳ ಬಗ್ಗೆ ತಿಳಿಸಿದರು.
    ಇದೇ ಸಂದರ್ಭದಲ್ಲಿ ಕೊಂಕಣಿ ಪೀಠ ಸ್ಥಾಪನೆಯಾಗಲು ಮೂಲ ಕಾರಣೀಕರ್ತರು ಹಾಗೂ ಸದಸ್ಯ ಪೀಠದ ಸಲಹಾ ಸಮಿತಿ ಸದಸ್ಯರೂ ಆಗಿರುವ ಜಿಲ್ಲೆಯ ನೆಚ್ಚಿನ ಮಾಜಿ ಸಚಿವರೂ ಹಾಗೂ ಹಾಲಿ ಶಾಸಕ ಆರ್.ವಿ.ದೇಶಪಾಂಡೆಯವರ ಶುಭ ಸಂದೇಶವನ್ನು ವಾಚನ ಮಾಡಲಾಯಿತು. ಕೊನೆಗೆ ಸಂಗೀತಾ ಹಾಗೂ ಸುಧಾ ಪಾಲನಕರರವರಿಂದ ಕೊಂಕಣಿ ಗಾಯನ ನೃತ್ಯ ಕಾರ್ಯಕ್ರಮ ಜರುಗಿದವು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top