• Slide
    Slide
    Slide
    previous arrow
    next arrow
  • ಸಂಘದ, ಸದಸ್ಯರ ಒಳಿತಿಗಾಗಿ ಸದಾ ಕಾರ್ಯತತ್ಪರನಾಗಿರುತ್ತೇನೆ: ರಾಮಕೃಷ್ಣ ಹೆಗಡೆ ಕಡವೆ

    300x250 AD

    ಶಿರಸಿ: ಟಿಎಸ್ಎಸ್’ನ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸದಸ್ಯರು ಆಡಳಿತದಲ್ಲಿ ಬದಲಾವಣೆ ಬಯಸಿ ನೀಡಿದ ನಿರ್ಣಯಕ್ಕೆ ನಾನು ಬದ್ಧನಿದ್ದೇನೆ ಎಂದು ರಾಮಕೃಷ್ಣ ಹೆಗಡೆ ಕಡವೆ ಹೇಳಿದ್ದಾರೆ.

    ಚುನಾವಣೆ ನಂತರ ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ಅಡಿಕೆ ಬೆಳೆಗಾರರಿಗೆ ಪ್ರಾತಃಸ್ಮರಣೀಯರಾದ ದಿ.ಶ್ರೀಪಾದ ಹೆಗಡೆ ಕಡವೆಯವರು ಸಹಕಾರಿ ರಂಗದ ಮೂಲಕ ಶೋಷಣಾರಹಿತ ಸಮಾಜದ ನಿರ್ಮಾಣದ ಗುರಿ, ನಂಬಿಕೆ ಹೊಂದಿದವರಾಗಿದ್ದರು. ಬಡ, ದುರ್ಬಲ ವರ್ಗದ ರೈತರ ಕಷ್ಟ ಕಾರ್ಪಣ್ಯಗಳಿಗೆ ಸದಾ ಕಾಲ ಸ್ಪಂದಿಸಿ ಪರಿಹಾರ ಒದಗಿಸುತ್ತಿದ್ದರು. ಅವರ ಮಗನಾದ ನಾನು ಅವರ ಆದರ್ಶಗಳು, ಮಾರ್ಗದರ್ಶನಗಳನ್ನು ನಂಬಿ, ಅವರು ತೋರಿದ ದಾರಿಯಲ್ಲೇ ಮುಂದುವರೆಯುತ್ತಿದ್ದೇನೆ. ನಾನು ಟಿ.ಎಸ್.ಎಸ್.ನ ನಿರ್ದೇಶಕ ಅಥವಾ ಪದಾಧಿಕಾರಿಯಾಗುವುದಕ್ಕಿಂತ ಮುಂಚೆ ಒಬ್ಬ ಸಾಮಾನ್ಯ ಸದಸ್ಯ. ಸಂಘದ ಹಾಗೂ ಸದಸ್ಯರ ಒಳಿತಿಗಾಗಿ ಸದಾ ಕಾರ್ಯತತ್ಪರನಾಗಿರುತ್ತೇನೆ. ಸದಸ್ಯರ ಕಷ್ಟ ಕಾರ್ಪಣ್ಯಗಳಿಗೆ ಮುಂದೂ ಸಹ ಸ್ಪಂದಿಸುತ್ತೇನೆ ಎಂದಿದ್ದಾರೆ.

    300x250 AD

    ಆಡಳಿತ ಮಂಡಳಿಯ ಒಬ್ಬ ನಿರ್ದೇಶಕನಾಗಿ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಆದ್ಯತೆಯ ಮೇಲೆ ಪರಿಹಾರ ಒದಗಿಸುತ್ತೇನೆ. ಸಂಘದ ಸಮಗ್ರ ಹಿತ ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯೊಂದಿಗೆ ಸಾಮರಸ್ಯದಲ್ಲಿ ಮುಂದುವರೆಯುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯರಿಗೆ, ಆಡಳಿತ ಮಂಡಳಿ ನಿರ್ದೇಶಕರಿಗೆ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೆ ಪ್ರಸ್ತುತ ಚುನಾವಣೆಯಲ್ಲಿ ನಾನು ನಂಬಿದ ತತ್ವ ಆದರ್ಶಗಳಲ್ಲಿ ನಂಬಿಕೆ ಇಟ್ಟು, ನನ್ನ ಬಳಗದ ಪರವಾಗಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ  ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top