ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಇಲ್ಲಿನ ದಿ ತೋಟಗಾರ್ಸ್ ಕೋ-ಆಪ್ ಸೇಲ್ ಸೊಸೈಟಿಯ ಚುನಾವಣೆಯ ಫಲಿತಾಂಶ ಭಾನುವಾರ ಮಧ್ಯರಾತ್ರಿ 2 ಗಂಟೆಯ ವೇಳೆಗೆ ಪೂರ್ಣವಾಗಿ ಪ್ರಕಟವಾಗಿದ್ದು, ಕಡವೆ ರಾಮಕೃಷ್ಣ ಹೆಗಡೆಯವರ ಬಣದ ವಿರುದ್ಧ ಗೋಪಾಲಕೃಷ್ಣ ವೈದ್ಯ ಅವರ ತಂಡವು ಪ್ರಚಂಡ ಬಹುಮತ ಸಾಧಿಸಿ, ಗೆಲುವಿನ ನಗೆ ಬೀರಿದೆ.
ಗೋಪಾಲಕೃಷ್ಣ ವೈದ್ಯ ಅವರ ಬಣದ ಒಟ್ಟೂ 14 ಅಭ್ಯರ್ಥಿಗಳು ಜಯ ಸಾಧಿಸಿದ್ದು, ಮಹಿಳಾ ಮೀಸಲು ಕ್ಷೇತ್ರದಿಂದ ನಿರ್ಮಲಾ ರಾಘವ ಭಟ್ಟ ಅಗಸಾಲ ಬೊಮ್ಮನಳ್ಳಿ 1885 ಮತ, ವಸುಮತಿ ಬಾಲಚಂದ್ರ ಭಟ್ಟ 1,745 ಮತ, ಹಿಂದುಳಿದ ವರ್ಗ (ಅ) ಕ್ಷೇತ್ರದಿಂದ ಸ್ಪರ್ಧಿಸಿದ ದೇವೇಂದ್ರ ಈರಪ್ಪ ನಾಯ್ಕ ಕುಪ್ಪಳ್ಳಿ 1,686 ಮತ, ಹಿಂದುಳಿದ ವರ್ಗ (ಬ) ಕ್ಷೇತ್ರದಿಂದ ಸ್ಪರ್ಧಿಸಿದ ವೀರೇಂದ್ರ ಪುಟ್ಟಣ್ಣ ಗೌಡರ ತೋಟದಮನೆ 1,822 ಮತ, (ಬ) ವರ್ಗದ ಸಾಮಾನ್ಯ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ ರವೀಂದ್ರ ಜಯಪ್ರಕಾಶ ಹೆಗಡೆ ಹಿರೇಕೈ 1,885 ಮತ, ಮಹಾಬಲೇಶ್ವರ ನರಸಿಂಹ ಭಟ್ಟ, ತೋಟಿಮನೆ 1820 ಮತ, ಅಶೋಕ ಗೌರೀಶ ಹೆಗಡೆ, ಅಬ್ಬಿಗದ್ದೆ 1813 ಮತ, ರವೀಂದ್ರ ಸತ್ಯನಾರಾಯಣ ಹೆಗಡೆ 1705 ಮತ, ಕೃಷ್ಣ ಗಣಪತಿ ಹೆಗಡೆ ಜೂಜಿನಬೈಲ್ 1683 ಮತ, ವಸಂತ ತಿಮ್ಮಪ್ಪ ಹೆಗಡೆ 1593 ಮತ, ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ 1518 ಮತ ಪಡೆದು ಗೆಲುವನ್ನು ದಾಖಲಿಸಿದ್ದಾರೆ. ಇನ್ನುಳಿದಂತೆ ಸಂತೋಷ ವಿಶ್ವೇಶ್ವರ ಭಟ್ಟ ಹಳವಳ್ಳಿ 1514 ಮತ, ನರಸಿಂಹ ತಿಮ್ಮಣ್ಣ ಭಟ್ಟ ಗುಂಡ್ಕಲ್ 1092 ಮತ ಹಾಗೂ (ಅ) ವರ್ಗದ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ ಸೋಂದಾ ಸೊಸೈಟಿಯ ಗಣಪತಿ ವಿ. ಜೋಶಿ 2008 ಮತ, ಮುಂಡಗನಮನೆ ಸೊಸೈಟಿಯ ಗೋಪಾಲಕೃಷ್ಣ ವಿ. ವೈದ್ಯ 2072 ಮತ, ತಾರಗೋಡ ಸೊಸೈಟಿಯ ದತ್ತಗುರು ಎಸ್. ಹೆಗಡೆ 1765 ಮತ, ಸಾಲ್ಕಣಿ ಸೊಸೈಟಿಯ ಪುರುಷೋತ್ತಮ ನರಸಿಂಹ ಹೆಗಡೆ 1734 ಮತಗಳನ್ನು ಪಡೆಯುವುದರ ಮೂಲಕ ಜಯ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಕಡವೆ ರಾಮಕೃಷ್ಣ ಹೆಗಡೆ ಬಣದ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ ವರದಾ ರಾಮಕೃಷ್ಣ ಹೆಗಡೆ ಜಾಜಿಮನೆ 1261, ವೀಣಾ ಎಮ್. ಹೆಗಡೆ, ಅಪ್ಪೆಕಟ್ಟು 1209, ಹಿಂದುಳಿದ ವರ್ಗ (ಅ) ಕ್ಷೇತ್ರದಿಂದ ಸ್ಪರ್ಧಿಸಿದ ನಾರಾಯಣ ಈರಾ ನಾಯ್ಕ 1324, ಹಿಂದುಳಿದ ವರ್ಗ (ಬ) ಕ್ಷೇತ್ರದಿಂದ ಸ್ಪರ್ಧಿಸಿದ ಪ್ರವೀಣ ಶಿವಲಿಂಗ ಗೌಡ 1233, (ಬ) ವರ್ಗದ ಸಾಮಾನ್ಯ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ 1518 ಉಮಾನಂದ ಗೋವಿಂದ ಭಟ್ಟ ಕೊಡ್ಲಳ್ಳಿ 1166, ಗಣಪತಿ ವಿ. ಹೆಗಡೆ ಸೂಳಗಾರ 1161, ಕೃಷ್ಣ ಗಣಪತಿ ಬೋಡೆ 1115, ಬಾಲಚಂದ್ರ ಪಿ. ಹೆಗಡೆ, ಕೊಡಮೂಡ 1066, ರಾಮಕೃಷ್ಣ ತಿ. ಹೆಗಡೆ ಅಳಗೋಡ 1048 ಹಾಗೂ (ಅ) ವರ್ಗದ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ ದಿ ತೋಟಗಾರ್ಸ್ ರೂರಲ್ ಕೋ-ಆಪ್ ಅಗ್ರಿಕಲ್ಚರ್ ಕ್ರೆಡಿಟ್ ಸೊಸೈಟಿಯ ಗಣಪತಿ ಶೇಷಗಿರಿ ರಾಯ್ಸದ್ 1168, ಹಾರುಗಾರ ಸೊಸೈಟಿಯ ಗುರುಪಾದ ಎಮ್. ಹೆಗಡೆ 1204, ಕಾಳಂಗಿ ಸೊಸೈಟಿಯ ರಾಜಶೇಖರ ಬಂಗಾರೆಪ್ಪ ಗೌಡ್ರು 861, ಕೊರ್ಲಕಟ್ಟಾ ಸೊಸೈಟಿಯ ಸುರೇಶ ರಾಮಾ ನಾಯ್ಕ 856 ಮತಗಳನ್ನು ಪಡೆಯುವುದರ ಮೂಲಕ ವೈದ್ಯ ಬಣದ ಎದುರು ಹಿನ್ನಡೆ ಸಾಧಿಸಿದ್ದಾರೆ.
ಇನ್ನು ಪಕ್ಷೇತರವಾಗಿ (ಬ) ವರ್ಗದ ಸಾಮಾನ್ಯ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ ಸುಬ್ರಾಯ ವೆಂಕಟ್ರಮಣ ಭಟ್ಟ, ಬಕ್ಕಳ 266 ಮತ ಹಾಗೂ ವಾಸುದೇವ ಅನಂತ ಹೆಗಡೆ, ಕರ್ಕಿಸವಲು 180 ಮತ ಪಡೆಯುವುದರ ಮೂಲಕ ಸೋಲುಂಡಿದ್ದಾರೆ.