ಶಿರಸಿ: ನಾಡಿನೆಲ್ಲೆಡೆ ಶೃದ್ಧಾ ಭಕ್ತಿಯಿಂದ ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಶಿರಸಿಯಲ್ಲಿ ಜೀವಂತ ನಾಗರ ಹಾವಿಗೆ ಹಾಲೆರೆಯುವ ಮೂಲಕ ವಿಶೇಷವಾಗಿ ಆಚರಿಸಲಾಗಿದೆ.
ತಾಲೂಕಿನ ಹುಲೇಕಲ್ಲಿನ ಪ್ರಶಾಂತ ಎಂಬುವವರು ಹಾವನ್ನು ಹಿಡಿಯುವುದರಲ್ಲಿ ಪರಿಣಿತಿ ಹೊಂದಿದ್ದು, ಇವರು ತಮ್ಮ ಕುಟುಂಬದೊಂದಿಗೆ ಪ್ರತಿವರ್ಷ ನಾಗರಪಂಚಮಿಯಂದು ಜೀವಂತ ನಾಗರ ಹಾವಿಗೆ ಹಾಲೆರೆದು ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸುತ್ತಾರೆ. ಹಾಗೆಯೇ ಈ ವರ್ಷವೂ ಕೂಡಾ ಕುಟುಂಬದೊಂದಿಗೆ ನಾಗರಕ್ಕೆ ಪೂಜೆ ಸಲ್ಲಿಸಿ, ಹಾವನ್ನು ರಕ್ಷಿಸಿ, ಹಾವಿನ ಸಂತತಿಯನ್ನು ಕಾಪಾಡಿ ಎಂಬ ಸಂದೇಶ ನೀಡಿದ್ದಾರೆ.