• Slide
  Slide
  Slide
  previous arrow
  next arrow
 • ಕಾರು ಪಲ್ಟಿ; 9 ಜನರಿಗೆ ಗಾಯ

  300x250 AD

  ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಇಕೋ ಬೀಚ್ ಸಮೀಪ ಭಟ್ಕಳ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಎಡಕ್ಕೆ ತಿರುಗಿಸಿದ ಪರಿಣಾಮ ಕಾರು ಪಲ್ಟಿಯಾಗಿ ಗಟಾರದಲ್ಲಿ ಬಿದ್ದಿದೆ.
  ಬೆಂಗಳೂರು ಮೂಲದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಆಗಮಿಸಿದವರು ಕಾರು ಚಾಲಕನ ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಆದಿತ್ಯ, ಶಿಲ್ಪ, ಆಕಾಶ, ತರುಣ, ರೊಹೇಬ್, ಖುಷಿ, ಪವನಕುಮಾರ, ಯಶವಂತ ನಾಯ್ಡು, ಮೈಸುರು ಮೂಲದ ಪ್ರಿಯಾಂಕ ಗಾಯಗೊಂಡವರಾಗಿದ್ದಾರೆ.
  ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಅಂಬುಲೆನ್ಸ ಮೂಲಕ ಕರೆದೊಯ್ಯಲಾಗಿದೆ. ಈ ಸಂಬoಧ ಚಾಲಕ ಯಶವಂತ ನಾಯ್ಡು ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top