ಸಿದ್ದಾಪುರ: ತಾಲೂಕಿನ ಇಟಗಿ ಮುಸೇಗಾರಿನ ನೇತ್ರಾವತಿ ಹೆಗಡೆ ಅವರಿಗೆ ಕೃಷಿ ಇಲಾಖೆಯಿಂದ ರಾಜ್ಯಮಟ್ಟದ ‘ಉದಯೋನ್ಮುಖ ಕೃಷಿ ಪಂಡಿತ’ ಪ್ರಶಸ್ತಿ ಘೋಷಣೆಯಾಗಿದೆ.
ಸಾಂಪ್ರದಾಯಿಕ ಕೃಷಿಯ ಜೊತೆಯಲ್ಲಿ ಇವರು ಕಳೆದ 25 ವರ್ಷಗಳಿಂದ ಸಾಂಬಾರು ಬೆಳೆಗಳನ್ನು, ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಲವಂಗ, ಜಾಯಿಕಾಯಿ, ಶುಂಠಿ, ಅರಿಶಿಣ, ಏಲಕ್ಕಿ, ಕಾಳುಮೆಣಸು, ಹಿಪ್ಲಿಯಂತಹ ಸಾಂಬಾರು ಬೆಳೆಗಳಲ್ಲದೇ ಲಿಚ್ಚಿ, ರಾಂಬುಟಾನ್, ಮೆಂಗಾಸ್ಟಿನ್, ಸೀತಾಫಲ, ಲಕ್ಷ್ಮಣ ಫಲ, ಪಿಸ್ತಾ, ಮೆಕೆಡಮಿಯಾ, ಅಂಜೂರ, ಅವಕ್ಕಾಡು ಡ್ರ್ಯಾಗನ್ ಫ್ರುಟ್, ಎಗ್ ಫ್ರುಟ್ ಈ ರೀತಿಯ ಹಣ್ಣುಗಳನ್ನು ಬೆಳೆಯುತ್ತಿದ್ದು ಸೇಬು, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಬೆಳೆಯುವ ಪ್ರಯತ್ನ ನಡೆಸಿದ್ದಾರೆ. ಎರಡು ನೂರಕ್ಕೂ ಹೆಚ್ಚು ಜಾತಿಯ ವಿವಿಧ ಬೀಜಗಳನ್ನು ಸಹ ಸಂಗ್ರಹಿಸಿದ್ದಾರೆ. ನೇತ್ರಾವತಿಯವರಿಗೆ ಪ್ರಶಸ್ತಿ ಘೋಷಣೆಯಾದ ಕುರಿತು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.