• Slide
  Slide
  Slide
  previous arrow
  next arrow
 • ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 60 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ

  300x250 AD

  ಭಟ್ಕಳ: ಗೋದಾಮೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 125 ಚೀಲದ 60 ಕ್ವಿಂಟಾಲ್ ಪಡಿತರ ಅಕ್ಕಿ ಚೀಲಗಳನ್ನು ಜಪ್ತಿಪಡಿಸಿಕೊಂಡು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಹೆಗ್ಗಲ್‌ನಲ್ಲಿ ನಡೆದಿದೆ.
  ಗುಲಾಬ್ ಸಾಬ್, ಅಬ್ದುಲ್ ರೆಹಮಾನ್ ಹಾಗೂ ಇಮ್ತಿಯಾಜ್ ಬಂಧಿತರು. ಈ ಗೋದಾಮಿನಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಪಡಿತರ ಅಕ್ಕಿ ಚೀಲಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನ್ ಗೋಪಾಲ್ ಹಾಗೂ ಆಹಾರ ನಿರೀಕ್ಷಕ ಪಾಂಡು ನಾಯ್ಕ ಹಾಗೂ ಜಾಲಿ ಗ್ರಾಮ ಆಡಳಿತಾಧಿಕಾರಿ ಕೆ.ಶಂಭು, ಗ್ರಾಮ ಸಹಾಯಕ ವಾಸು ಶೇಟಿ ಮತ್ತು ಗ್ರಾಮೀಣ ಠಾಣೆಯ ಸಿಬ್ಬಂದಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು 125 ಪಡಿತರ ಅಕ್ಕಿ ಚೀಲಗಳನ್ನು ವಶ ಪಡೆದುಕೊಂಡಿದ್ದಾರೆ.
  ಈ ಅಕ್ರಮ ಅಕ್ಕಿ ಸಂಗ್ರಹಕ್ಕೆ ಮೂಲ ರೂವಾರಿ ನಿಶಾನ್ ಎನ್ನುವವನು ಎಲ್ಲಿಯವನು, ಎಲ್ಲಿಂದ ಅಕ್ಕಿಯನ್ನು ಇವರಿಗೆ ಸರಬರಾಜು ಮಾಡಲಾಗಿದೆ ಎನ್ನುವುದು ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top