Slide
Slide
Slide
previous arrow
next arrow

ಮಂಚಿಕೇರಿಯಲ್ಲಿ ಅಕ್ರಮ ಶ್ರೀಗಂಧ ವಶ; ಆರೋಪಿ ಬಂಧನ

300x250 AD

ಯಲ್ಲಾಪುರ: ಮಂಚಿಕೇರಿಯ ಜನತಾ ಕಾಲೋನಿಯಲ್ಲಿ ಖಚಿತ ಮಾಹಿತಿ ಮೇರೆಗೆ ಗಣೇಶ ಸೋಮು ಲಮಾಣಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 52 ಕೆಜಿ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಶ್ರೀಗಂದದ ಕಟ್ಟಿಗೆಯನ್ನು ಗುರುವಾರ ಮಂಚಿಕೇರಿ ಅರಣ್ಯ ವಲಯದ ಅರಣ್ಯ ಸಿಬ್ಬಂದಿಗಳು ಜಪ್ತಿಪಡಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಜಿ.ಹೆಗಡೆರವರ ಮಾರ್ಗದರ್ಶನದಲ್ಲಿ ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿಗಳಾದ ಹಿಮವತಿ ಭಟ್ ನಿರ್ದೇಶನದಲ್ಲಿ ಮಂಚಿಕೇರಿ ವಲಯದ ವಲಯ ಅರಣ್ಯಾಧಿಕಾರಿಗಳಾದ ಅಮಿತಕುಮಾರ ಚವ್ಹಾಣ ನೇತೃತ್ವದ ಕಾರ್ಯಾಚರಣೆಯ ತಂಡದಲ್ಲಿ ಮಂಚಿಕೇರಿ ಶಾಖೆಯ ಉಪವಲಯ ಅರಣ್ಯಾಧಿಕಾರಿಗಳಾದ ಪವನಕುಮಾರ ಲೋಕುರ, ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ ಪವಾರ, ಸಂಗಮೇಶ ಅಂಗಡಿ, ಕಲ್ಲಪ್ಪ. ಬರದೂರ, ಮಂಜುನಾಥ ಆಗೇರ, ಜಗದೀಶ ಪಾಲಕನವರ, ವಿರಾಜ್ ನಾಯಕ, ಗಸ್ತು ವನಪಾಲಕ ವಿಷ್ಣು ಪೂಜಾರಿ ಮತ್ತು ವಾಹನ ಚಾಲಕರಾದ ಗಂಗಾಧರ ರೆಡ್ಡಿ, ಮಂಜು ನಾಯ್ಕ ಮತ್ತು ಅರಣ್ಯ ವೀಕ್ಷಕರುಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top