• Slide
    Slide
    Slide
    previous arrow
    next arrow
  • ದಿ. ಕಡವೆ ಶ್ರೀಪಾದ ಹೆಗಡೆಯವರ ಆದರ್ಶ ಸಹಕಾರಿ ಸಾಕ್ಷರರಿಗೆ ಎಷ್ಟು ಅರ್ಥವಾಗಿದೆ??

    300x250 AD

    ದಿ. ಶ್ರೀಪಾದ ಹೆಗಡೆ ಕಡವೆಯವರ ತತ್ವಾದರ್ಶಗಳು ಎಂದಿಗೂ ಸಹಕಾರಿ ರಂಗದ ದಾರಿದೀಪ. ಅವರು ಪ್ರತಿಪಾದಿಸಿದ ತೋಟಿಗರ ಅಮೂಲಾಗ್ರ ಅಭಿವೃದ್ಧಿಯ ದೃಷ್ಠಿಕೋನಗಳು ಹಲವಾರು ಕುಟುಂಬಗಳನ್ನು, ಸಂಸ್ಕೃತಿಯನ್ನು, ಸಮಾಜವನ್ನು ಯೋಗ್ಯ ಪಥದಲ್ಲಿ ಮುನ್ನಡೆಸುತ್ತಿದೆ ಎಂಬುದು ನಿಸ್ಸಂಶಯ ಸತ್ಯ.
    ಮುಂದೆ ಸಹಕಾರಿ ರಂಗ ಉತ್ತಮವಾಗಿ ಇರಬೇಕೆಂದು ದಿ. ಕಡವೆಯವರು, ತಮ್ಮೊಂದಿಗೆ ಸಹಕಾರಿ ರಂಗದಲ್ಲಿದ್ದ ಇತರ ಹಿರಿಯರ ಮಕ್ಕಳನ್ನು ಸಹಕಾರಿ ರಂಗಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರ ಪರಿಣಾಮವಾಗಿ ಕಾನ್ಮೂಲೆ ವೆಂಕಟ್ರಮಣ ಜೋಶಿಯವರ ಮಗ ಗಜಾನನ ಜೋಶಿ, ಹುಲೇಮಳಗಿ ಜಿ. ಜಿ. ಹೆಗಡೆಯವರ ಮಗ ಲೋಕೇಶ ಹೆಗಡೆ ಹುಲೇಮಳಗಿ, ಮುಂತಾದವರು ಸಹಕಾರಿ ರಂಗಕ್ಕೆ ಕಡವೆಯವರ ಆಶೀರ್ವಾದದಿಂದ ಪಾದಾರ್ಪಣೆ ಮಾಡಿದರು. ಹೀಗೆ ವಂಶಪಾರಂಪರ್ಯವಾಗಿ ತಾವು ಬಂದಿದ್ದಿದ್ದರೂ ಬೇರೆಯವರ ಕಡೆ ಬೆರಳು ತೋರುವುದು ಎಷ್ಟು ಉಚಿತ?

    ಸಹಕಾರಿ ಕ್ಷೇತ್ರದ ಹಲವು ಸಂಘಗಳಲ್ಲಿ ಈ ಹೊಸಬರ ಪ್ರಾತಿನಿಧ್ಯ ಇತ್ತು. ದಿ. ಕಡವೆಯವರು ಬದುಕಿರುವ ತನಕ ಈ ಹೊಸಬರ ತಪ್ಪನ್ನೆಲ್ಲ ನಾಜೂಕಿನಿಂದ ತಿದ್ದಿ ತತ್ವಾದರ್ಶಗಳ ಸರಿದಾರಿಯಲ್ಲಿ ಒಯ್ಯುತ್ತಿದ್ದರು. ಅವರ ನಂತರದಲ್ಲಿ ಕಡವೆಯವರ ಸಹಕಾರಿ ತತ್ವಾದರ್ಶಗಳು ಅರ್ಥವಾಗದ ಈ ಹೊಸಬರಿಗೆ ಸರಿಯಾದ ಮಾರ್ಗದರ್ಶನ ಇಲ್ಲದೇ ದಾರಿಯೇ ತಪ್ಪಿದ್ದು ತಿಳಿಯಲಿಲ್ಲ. ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ ಮುಂತಾದೆಡೆ ಇವರ ವ್ಯವಹಾರ ಜನಮನ್ನಣೆ ಕಳೆದುಕೊಂಡಿತು. ಆದರೆ ಸಹಕಾರಿ ಸಂಘಗಳ ಸದಸ್ಯರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
    ನಂತರದ ಚುನಾವಣೆಗಳಲ್ಲಿ ಸದಸ್ಯರುಗಳು ಇವರ ಪ್ರಾಮುಖ್ಯತೆಯನ್ನು ಗೌಣಮಾಡುತ್ತಾ ಬಂದು, ಪ್ರತಿಷ್ಠಿತ ಸಹಕಾರಿ ಬ್ಯಾಂಕಿನ ನಿಕಟಪೂರ್ವ ಚುನಾವಣೆಯಲ್ಲಿ ಆಯ್ಕೆ ಮಾಡಲೇ ಇಲ್ಲ. ದಿ. ಕಡವೆಯವರ ತತ್ವಾದರ್ಶಗಳನ್ನು ಅರ್ಥ ಮಾಡಿಕೊಳ್ಳದ ಇಂಥ ಸಹಕಾರಿ ಮುಖಂಡರು ತಮ್ಮ ಸೋಲಿಗೆ ಬೇರೆಯವರನ್ನು ಬೈಯ್ಯುತ್ತಿರುವುದು ವಿಪರ್ಯಾಸ!

    300x250 AD

    ದಿ. ಕಡವೆಯವರು ತಮ್ಮ ಮಗನನ್ನು ಅರ್ಹತೆಯಿದ್ದರೂ ತಾವಿರುವ ತನಕ ಸಹಕಾರಿ ರಂಗಕ್ಕೆ ತರಲಿಲ್ಲ. ನಂತರದಲ್ಲಿ ದಿ. ಕಡವೆಯವರ ಮಗನಾದ ಶ್ರೀ ರಾಮಕೃಷ್ಣ ಹೆಗಡೆ ಕಡವೆಯರನ್ನು ಸದಸ್ಯರೇ ಒತ್ತಾಯದಿಂದ ಸಹಕಾರಿ ರಂಗಕ್ಕೆ ಕರೆತಂದರು. ದಿ. ಕಡವೆಯವರ ಮಗನೆಂದು ಹಮ್ಮು, ಬಿಮ್ಮುಗಳನ್ನು ಸ್ವಲ್ಪವೂ ತೋರದೇ, ಎಲ್ಲ ಸದಸ್ಯರ ಶ್ರೇಯೋಭಿವೃದ್ಧಿಯನ್ನೇ ನಿಜವಾಗಿ ಬಯಸಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಸದಸ್ಯರೆಲ್ಲರಿಗೆ ತಿಳಿದಿರುವ ವಿಷಯ.– ಗಣಪತಿ ನಾರಾಯಣ ಹೆಗಡೆ, ಬಾಳೇತೋಟ (ಟಿಎಸ್ಎಸ್ ಶೇರು ಸದಸ್ಯ)

    Share This
    300x250 AD
    300x250 AD
    300x250 AD
    Leaderboard Ad
    Back to top