ಶಿರಸಿ: “ಸಮನ್ವಯ” ಚಾರಿಟೇಬಲ್ ಟ್ರಸ್ಟ (ರಿ) ಶಿರಸಿ, ಕೆ. ಎಚ್. ಬಿ. ಕಾಲೋನಿ, ಶಿರಸಿ ಇವರ ಆಶ್ರಯದಲ್ಲಿ ಆ,30 ಬುಧವಾರ ಇಳಿಹೊತ್ತು 4 ಘಂಟೆಗೆ “ಸಮನ್ವಯ” ಚಾರಿಟೇಬಲ್ ಟ್ರಸ್ಟಿನ ಉದ್ಘಾಟನೆಯು ವರಸಿದ್ದಿ ವಿನಾಯಕ ದೇವಸ್ಥಾನ ಕೆ.ಎಚ್.ಬಿ. ಕಾಲೋನಿಯಲ್ಲಿ ನಡೆಯಲಿದೆ. ಸಂಜೆ 5 ಘಂಟೆಗೆ ಡಾ. ಪುಟ್ಟರಾಜು ಸೇವಾ ಸಮಿತಿ ಹಾಗೂ ಸ್ಪಂದನ ಸಿರಿ ವೇದಿಕೆ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರಿಗುಡಿ ಆಡಳಿತ ಮಂಡಳಿ ಸದಸ್ಯ ಆರ್. ಜಿ. ನಾಯ್ಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದು, ಹಿರಿಯ ಸಾಹಿತಿ ಶ್ರೀಮತಿ ಭಾಗೀರತಿ ಹೆಗಡೆ, ಶಿರಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಶಿಕ್ಷಣಾಧಿಕಾರಿ ಎನ್. ಆರ್. ಹೆಗಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು,ಅತಿಥಿಗಳಾಗಿ ನಿವೃತ್ತ ಯುನಿವರ್ಸಿಟಿ ಡೀನ್ ಸಾಹಿತಿ, ಯಕ್ಷಗಾನ ವಿದ್ವಾಂಸ ಡಾ. ಜಿ. ಎ. ಹೆಗಡೆ ಸೋಂದಾ, ಹಿರಿಯ ಸಾಹಿತಿ ಡಿ. ಎಸ್. ನಾಯ್ಕ, ಮುಕ್ತಕ ಕವಿ ಕೃಷ್ಣ ಪದಕಿ, ಸ್ಪಂದನಸಿರಿ ವೇದಿಕೆ ರಾಜ್ಯಾಧ್ಯಕ್ಷೆ ಶ್ರೀಮತಿ ಕಲಾವತಿ ಮಧುಸೂಧನ ಹಾಸನ, ಸಾಹಿತಿ ಹಾಗೂ ಅ. ಬಾ. ಸ ಪರಿಷತ್ತು ಬೆಂಗಳೂರು ಸದಸ್ಯ ಜಗದೀಶ ಭಂಡಾರಿ, ಹಿರಿಯ ಸಾಹಿತಿ ಎಸ್.ಎಸ್. ಭಟ್ಟ, ಪಂದಳ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ರಾಘು ಹೊನ್ನಾವರ, ವಿ. ಪಿ. ವೈಶಾಲಿ, ಕ.ಸಾ.ಪ ದ ತಾಲೂಕಾ ಅಧ್ಯಕ್ಷ ಸುಬ್ರಾಯ ಭಟ್, ಬಕ್ಕಳ, ಹಿರಿಯ ಸಾಹಿತಿ, ಕವಿ ಅಶೋಕ ಹಾಸ್ಯಗಾರ, ನಿವೃತ್ತ ಸಂಗೀತ ಪ್ರಾಧ್ಯಾಪಕಿ ಶ್ರೀಮತಿ ಶೈಲಜಾ ಮಂಗಳೂರ, ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಅಧ್ಯಕ್ಷ ಕೃಷ್ಣ ಎಸಳೆ, ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರಾಜಲಕ್ಷ್ಮಿ ಬೊಮ್ಮನಳ್ಳಿ ನಡೆಸಿಕೊಡಲಿದ್ದಾರೆ. ಸರ್ವರೂ ಆಗಮಿಸಿ ಪ್ರೋತ್ಸಾಹಿಸಲು ಕಾರ್ಯಕ್ರಮದ ಸಂಘಟಕರು ಕೋರಿದ್ದಾರೆ.