• Slide
    Slide
    Slide
    previous arrow
    next arrow
  • ಶ್ರೀ ಅರವಿಂದರ ಜನ್ಮದಿನೋತ್ಸವ: ‘ಶ್ರೀಮತಿ ಸ್ವಯಂವರ’ ಕಿರುನಾಟಕ ಪ್ರದರ್ಶನ

    300x250 AD

    ಶಿರಸಿ : ಸ್ಥಳೀಯ ಶ್ರೀ ಅರವಿಂದ ಅಭ್ಯಾಸ ಮಂಡಳಿಯು ಭಾರತದ 77 ನೇ ಸ್ವಾತಂತ್ರ್ಯೋತ್ಸವ ಮತ್ತು ಶ್ರೀ ಅರವಿಂದರ 151 ನೇ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ ದಿ. ಮಾಧವ ಪಂಡಿತ ದತ್ತಿ ಉಪನ್ಯಾಸದ ಜೊತೆಗೆ ಲಯನ್ಸ್ ಪ್ರೌಢಶಾಲಾ ಮಕ್ಕಳಿಂದ ‘ ಶ್ರೀಮತಿ ಸ್ವಯಂವರ’ ಎಂಬ ಕಿರು ನಾಟಕ ಪ್ರದರ್ಶನವನ್ನು ಸಂಯೋಜಿಸಲಾಗಿತ್ತು.

    ನಾಟಕಕಾರರಾದ ನಿವೃತ್ತ ಆಂಗ್ಲ ಪ್ರಾಧ್ಯಾಪಕ ಎಚ್.ಆರ್. ಅಮರನಾಥ ಮಾತನಾಡಿ 1908-09 ರಲ್ಲಿ ಅಲೀಪುರದ ಸೆರೆಮನೆ ಮತ್ತು ನ್ಯಾಯಾಲಯಗಳಲ್ಲಿ ಶ್ರೀ ಅರವಿಂದರಿಗೆ ‘ ಸರ್ವಂ ಖಲ್ವಿದಂ ಬ್ರಹ್ಮ ‘ ಎಂಬುದರ ಸಾಕ್ಷಾತ್ಕಾರವಾಗಿ ಎಲ್ಲೇಲ್ಲೂ ವಾಸುದೇವ ದರ್ಶನವಾಯಿತು. ಅಂಬರೀಷನ ಮಗಳಾದ ಶ್ರೀಮತಿಯ ಕನ್ಯಾಕಾಂಕ್ಷಿಗಳಾದ ನಾರದ-ಪರ್ವತರನ್ನು ಬಿಟ್ಟು ವಾಸುದೇನನ್ನು ಸ್ವಯಂವರದಲ್ಲಿ ಆಯ್ದುಕೊಳ್ಳುವ ಈ ಕಥಾ ಭಾಗವು ಕನ್ನಡದ ವರನಟ ಡಾ. ರಾಜಕುಮಾರ ಅವರ ಕೊನೆಯ ಆಸೆಯಾಗಿ ಉಳಿದ ಪೌರಾಣಿಕ ಚಲನಚಿತ್ರಕ್ಕೆ ಸಂಬಂಧ ಹೊಂದಿದೆ ಎಂದು ವಿವರಿಸಿದರು.

    300x250 AD

    ಶಿಕ್ಷಕಿ ಮುಕ್ತಾ ನಾಯಕ್ ನಿರ್ದೇಶನದ ಪ್ರದರ್ಶನದ ವಿವಿಧ ಪಾತ್ರಗಳಲ್ಲಿ ಲಯನ್ಸ ಶಾಲಾ ವಿದ್ಯಾರ್ಥಿಗಳಾದ ಕು. ನಿಧಿಪ್ ಹೆಗಡೆ, ಕು. ದಿಗಂತ್ ಭಟ್,ಕು. ಭಾರ್ಗವ ಹೆಗಡೆ, ಕು.ದರ್ಶನ್ ವಿ ಎನ್ ಹಾಗೂ ಕು. ಚಿನ್ಮಯ್ ಹೆಗಡೆ ಕೆರೆಗದ್ದೆ ಮನೋಜ್ಞವಾಗಿ ಅಭಿನಯಿಸಿ ಸಭಿಕರನ್ನು ರಂಜಿಸಿದರು. ಸಹಶಿಕ್ಷಕಿ ಶ್ರೀಮತಿ ಮುಕ್ತಾ ನಾಯ್ಕ ನಿರ್ದೇಶಕಿಯಾಗಿ ಹಾಗೂ ವೇಷಭೂಷಣದಲ್ಲಿ ಸಹಶಿಕ್ಷಕಕಿ ಶ್ರೀಮತಿ ಲಕ್ಷ್ಮೀ ಪ್ರದೀಪ ಅಮೀನ ಸಹಕರಿಸಿದರು. ಸಮಾರಂಭದ ಕೊನೆಯಲ್ಲಿ ಶ್ರೀ ಅರವಿಂದ ಅಭ್ಯಾಸ ಮಂಡಳಿಯ ವತಿಯಿಂದ ನಾಟಕ ತಂಡದವರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಲಾಯಿತು. ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಎಜುಕೆಷನ್ ಸೊಸೈಟಿ ಆಡಳಿತ ಮಂಡಳಿ ಲಯನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ- ಶಿಕ್ಷಕೇತರ ವೃಂದ ನಾಟಕ ತಂಡವನ್ನು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top