ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ “ಬೆಳೆ ಉತ್ಪಾದನೆ ಹಾಗೂ ಅವುಗಳ ಪ್ರಾಮುಖ್ಯತೆ” ವಿಷಯದ ಕುರಿತಾಗಿ ‘ಕ್ಷೇತ್ರ ಭೇಟಿ’ ಕಾರ್ಯಕ್ರಮವನ್ನು ಆಗಸ್ಟ 16 ಬುಧವಾರದಂದು ಶಾಲೆಯ ಆಡಳಿತ ಮಂಡಳಿಯ ಸದಸ್ಯ ನಿಶಾಂತ್ ಹೆಗಡೆ, ಹಾಲೇರಿಕೊಪ್ಪ ಇವರ ಹೊಲದಲ್ಲಿ ಆಯೋಜಿಸಲಾಗಿತ್ತು.
ಶ್ರೀನಿಕೇತನ ಶಾಲೆಯ ಪ್ರಾಂಶುಪಾಲರಾದ ವಸಂತ್ ಭಟ್, ಇಕೋ-ಕ್ಲಬ್‌ನ ಸಂಯೋಜಕ ಶಿಕ್ಷಕಿ ಆಶಾ ನಾಯ್ಕ, ಸದಸ್ಯರಾದ ಶ್ರೀಮತಿ. ಕವಿತಾ ನಾಯಕ ಹಾಗೂ ಶ್ರೀಮತಿ ರೂಪಾ ಶೆಟ್ಟರ್ ಉಪಸ್ಥಿತರಿದ್ದರು. ನಿಶಾಂತ ಭಟ್, ಬೆಳೆ ಉತ್ಪಾದನೆ, ಇವುಗಳ ಪ್ರಾಮುಖ್ಯತೆ ಹಾಗೂ ಸಾಗುವಳಿಗಳ ವಿವಿಧ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಮತ್ತು ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತದ ಸಸಿಗಳನ್ನು ನೆಡುವ ಮೂಲಕ ಪ್ರಾಯೋಗಿಕ ಅನುಭವ ಪಡೆದುಕೊಂಡರು.