ಶಿರಸಿ: ಗ್ರೀನ್ ಕೇರ್ ಸಂಸ್ಥೆಯ 2022-2023ರ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಇತ್ತೀಚಿಗೆ ನಡೆಯಿತು.
ಈ ಸಭೆಯಲ್ಲಿ ಸಂಸ್ಥೆಯ ಸರ್ವ ಸದಸ್ಯರು ಹಾಜರಿದ್ದು, ಕಳೆದ ಸಾಲಿನಲ್ಲಿ ನಡೆದ ಎಲ್ಲಾ ಚಟುವಟಿಕೆಗಳ ಬಗ್ಗೆ ಸಂಸ್ಥೆಯ ಕಾರ್ಯದರ್ಶಿಯಾದ ಜಿತೇಂದ್ರ ಕುಮಾರ್ ಆರ್. ಎಂ. ರವರು ವಿವರಿಸಿದರು. ಕಳೆದ ಸಾಲಿನ ಲೆಕ್ಕಪತ್ರದ ವಿವರಗಳನ್ನು ಸಂಸ್ಥೆಯ ಲೆಕ್ಕ ಪರಿಶೋಧಕರಾದ ಗಣೇಶ್ ಎಂ. ಹೆಗಡೆಯವರು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ.ಶ್ಯಾಮ್ ಸುಂದರ್ ಎಲ್ಲಾ ಸದಸ್ಯರೊಡನೆ ಚರ್ಚಿಸಿ ಮುಂದಿನ ಕಾರ್ಯಕ್ರಮಗಳ ರೂಪರೇಷೆಯನ್ನು ಸಿದ್ಧಪಡಿಸಿ, ಸಂಸ್ಥೆಯ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು. ಈ ಸಭೆಯಲ್ಲಿ ಪ್ರಶಾಂತ್ ಮುಳೆ ಮತ್ತು ಸದಾಶಿವ ಶಿವಯ್ಯನ ಮಠರವರನ್ನು ಕಾರ್ಯಕಾರಣಿ ಸಮಿತಿಗೆ ಎಲ್ಲಾ ಸದಸ್ಯರು ಅನುಮೋದಿಸಿದರು. ಸಂಸ್ಥೆಗೆ ಸೇರ್ಪಡೆಯಾದ ಹೊಸ ಸದಸ್ಯರುಗಳನ್ನು ಸ್ವಾಗತಿಸಿ, ಸಲಹಾ ಸಮಿತಿ ರಚಿಸುವ ಬಗ್ಗೆ ಚರ್ಚಿಸಿಲಾಯಿತು. ಇದೇ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಗೆ ಸಹಕರಿಸಿದ ಡಾ.ಆದಿತ್ಯ ಫಡ್ನಿಸ್, ನೇತ್ರ ತಜ್ಞರು, ರೋಟರಿ ಆಸ್ಪತ್ರೆ, ಶಿರಸಿ; ಡಾ.ರಾಧಿಕಾ ಎಂ ಮರಾಠೆ, ಅರಿವಳಿಕೆ ತಜ್ಞರು, ತೂಕದಾರ್ ಆಸ್ಪತ್ರೆ, ಶಿರಸಿ; ಡಾ.ಆಶೀಶ್ ವಿ ಜನ್ನು, ಮಕ್ಕಳ ತಜ್ಞರು, ಟಿಎಸ್ಎಸ್ ಆಸ್ಪತ್ರೆ, ಶಿರಸಿ; ಮಹೇಶ್ ಡಿ ನಾಯಕ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ), ಜಿಲ್ಲಾ ಶಾಖೆ ಉತ್ತರ ಕನ್ನಡ ಹಾಗೂ ಶ್ರೀ ಡೋನಿ ಡಿಸೋಜಾ, ಸಾಮಾಜಿಕ ಕಾರ್ಯಕರ್ತರು, ಶಿರಸಿ ರವರನ್ನು ಸಭಾ ಕಾರ್ಯಕ್ರಮದ ಅತಿಥಿಗಳಾದ ಶ್ರೀ ಅಶೋಕ್ ಹಾಸ್ಯಗಾರ, ಹಿರಿಯ ಸಂಪಾದಕರು, ಮತ್ತು ಶ್ರೀ ಬಿ. ಎಚ್. ನಾಯಕ್, ನಿವೃತ್ತ ಪ್ರಾಂಶುಪಾಲರು, ದಿವೇಕರ್ ವಾಣಿಜ್ಯ ಮಹಾವಿದ್ಯಾಲಯ, ಕಾರವಾರ, ಇವರು ಅಭಿನಂದನಾ ಪತ್ರಗಳನ್ನು ನೀಡಿ ಸನ್ಮಾನಿಸಿದರು.
ಸಂಸ್ಥೆಯ ಕಾರ್ಯಕಾರಿ ಸದಸ್ಯರಾದ ಶ್ರೀಮತಿ ಆಶಾ ಡಿಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು, ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ರೋಹಿಣಿ ಸೈಲ್ ರವರು ವಂದನಾರ್ಪಣೆಯನ್ನು ಮಾಡಿದರು.