Slide
Slide
Slide
previous arrow
next arrow

ದೇಶದ್ರೋಹಿಗಳನ್ನು ಹಿಮ್ಮೆಟ್ಟಿಸಿ ಭಾರತದ ಅಭಿವೃದ್ಧಿಗೆ ಮುಂದಾಗೋಣ: ತಹಶಿಲ್ದಾರ್ ದೀಕ್ಷಿತ್

300x250 AD

ಹೊನ್ನಾವರ: ದೇಶದ್ರೋಹಿಗಳನ್ನು ಹಿಮ್ಮೆಟ್ಟಿಸಿ, ಸಮಗ್ರ ಭಾರತದ ಅಭಿವೃದ್ಧಿಗೆ ಮುಂದಾಗೋಣ. ದೇಶದ ಭದ್ರತೆ ಕಾಪಾಡಿಕೊಳ್ಳುವುದು ಪ್ರತಿಯೋರ್ವರ ಕರ್ತವ್ಯವಾಗಿದೆ ಎಂದು ತಹಶೀಲ್ದಾರ ರವಿರಾಜ್ ದಿಕ್ಷೀತ್ ಹೇಳಿದರು.

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಆಡಳಿತಸೌದದಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೇರವೇರಿಸಿದ ಬಳಿಕ ಮಾತನಾಡಿದರು.

ಈ ವೇಳೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗಜಾನನ ನಾಯ್ಕ, ಸುಬ್ರಹ್ಮಣ್ಯ ಶೆಟ್ಟಿ, ಪ್ರಕಾಶ ನಾಯ್ಕ ಸನ್ಮಾನಿಸಿ ಗೌರವಿಸಲಾಯಿತು. ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸುವ ಜೊತೆ ಕಾಗದ ಪತ್ರ ಅತ್ಯುತ್ತಮ ನಿರ್ವಹಣೆಗಾಗಿ ಎಫ್.ಡಿ.ಎ ಅಧಿಕಾರಿ ರಾಜು ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

300x250 AD

ಈ ವೇಳೆ ತಾ.ಪಂ. ಆಡಳಿತಾಧಿಕಾರಿ ವಿನೋದ ಅಣ್ವೇಕರ್, ಇಓ ಸುರೇಶ ನಾಯ್ಕ, ಬಿಇಓ ಜಿ.ಎಸ್.ನಾಯ್ಕ, ಯುಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಸೇರಿದಂತೆ ಕಂದಾಯ, ಪಟ್ಟಣ ಪಂಚಾಯತಿ ಸಿಬ್ಬಂದಿಗಳು ವಿವಿಧ ಪಕ್ಷದ ಪ್ರಮುಖರು, ಸಂಘಟನೆಯ ಪ್ರಮುಖರು, ಅಧಿಕಾರಿಗಳು ಸಿಬ್ಬಂದಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top