ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಶಿರಸಿ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷರಾದ ಶ್ರೀಪಾದ ರಾಯ್ಸದ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಜಿಲ್ಲಾ ಆಯುಕ್ತರಾದ ಎಂ.ಎಂ.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೌಢಶಾಲೆಯ ಅಧ್ಯಕ್ಷರಾದ ಎಂ.ಆರ್.ಹೆಗಡೆ, ಉಪಾಧ್ಯಕ್ಷರಾದ ಶ್ರೀಮತಿ ವನಿತಾ ಹೆಗಡೆ ಸದಸ್ಯರಾದ ವಿ.ಪಿ.ಹೆಗಡೆ, ಸ್ಕೌಟ್ಸ್ ಆಯುಕ್ತರಾದ ವಿ.ಎಚ್.ಭಟ್ಕಳ್, ಗೈಡ್ಸ್ ಆಯುಕ್ತರಾದ ಶ್ರೀಮತಿ ಜ್ಯೋತಿ ಭಟ್, ಮುಖ್ಯಾಧ್ಯಾಪಕರಾದ ಶೈಲೇಂದ್ರ ಎಂ.ಎಚ್. ಎ.ಎಸ್.ಓ.ಸಿ. ವೀರೇಶ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಎನ್.ಎಸ್.ಭಾಗ್ವತ್ ಸ್ವಾಗತಿಸಿದರು. ಜಂಟೀ ಕಾರ್ಯದರ್ಶಿ ಶ್ರೀಮತಿ ಯಮುನಾ ಪೈ ವಂದಿಸಿದರು. ಕುಮಾರಿ ಸೌಖ್ಯ ವಿನಾಯಕ ಹೆಗಡೆ ನಿರ್ವಹಿಸಿದರು.
ಗೀತಗಾಯನ ಸ್ಪರ್ಧೆಯಲ್ಲಿ ಸ್ಕೌಟ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಾಲೆ ಶಿರಸಿ, ದ್ವಿತೀಯ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ, ಯಡಳ್ಳಿ,ತೃತೀಯ ಸ್ಥಾನವನ್ನು ಜೆ.ಎಂ.ಜೆ.ಶಿಕ್ಷಣ ಸಂಸ್ಥೆ, ಶಿರಸಿ, ಸಮಾಧಾನಕರ ಬಹುಮಾನವನ್ನು ಸ.ಹಿ.ಪ್ರಾ.ಶಾಲೆ, ಮಾಡನಕೇರಿ ತಮ್ಮದಾಗಿಸಿಕೊಂಡಿದ್ದಾರೆ.
ಗೈಡ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಗಜಾನನ ಪ್ರೌಢಶಾಲೆ, ಹೆಗಡೆಕಟ್ಟಾ, ದ್ವಿತೀಯ ಸ್ಥಾನವನ್ನು ಚಂದನ ಆಂಗ್ಲ ಮಾಧ್ಯಮ ಶಾಲೆ, ನರೇಬೈಲ್ ಶಿರಸಿ, ತೃತೀಯ ಸ್ಥಾನವನ್ನು ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಿರಸಿ, ಸಮಾಧಾನಕರ ಬಹುಮಾನವನ್ನು ಜೆ.ಎಂ.ಜೆ.ಶಿಕ್ಷಣ ಸಂಸ್ಥೆ, ಶಿರಸಿ ಪಡೆದುಕೊಂಡಿದ್ದಾರೆ. ಸ್ಪರ್ಧೆಯ ನಿರ್ಣಾಯಕರಾಗಿ ಉಮಾಕಾಂತ ಹೆಗಡೆ, ಗಣೇಶ ನಾಯ್ಕ ಹಾಗೂ ಎಸ್.ಎಂ.ಭಟ್ಟ ಕಾರ್ಯನಿರ್ವಹಿಸಿದರು. ರಮೇಶ ಗೌಡ ನಿರ್ವಹಿಸಿದರು.