ಶಿರಸಿ: ಭಾರತದ ಪ್ರಜೆ ಸಂವಿಧಾನಕ್ಕೆ ಗೌರವಿಸಿ, ಸಂವಿಧಾನದ ವಿಧಿ-ವಿಧಾನ ಪ್ರಕಾರ ನಡೆದುಕೊಳ್ಳಬೇಕು. ದೇಶದ ಏಕತೆ ಮತ್ತು ಭಾವೈಕ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ವರ್ತಿಸುವುದೊಂದಿಗೆ, ಜಾತ್ಯಾತೀತ ಭಾವನೆಯನ್ನ ಉಳಿಸಿ, ಬೆಳಿಸಿಕೊಂಡು ಹೋಗಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದ ಆವರಣದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಮೇಲಿನಂತೆ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಸಂತೀಶ್ ನಾಯ್ಕ ಮದರಳ್ಳಿ, ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ತಾಲೂಕ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ, ಹೋರಾಟಗಾರರ ವೇದಿಕೆಯ ಪಧಾಧಿಕಾರಿಗಳಾದ ರಾಜು ನರೇಬೈಲ್, ಲಕ್ಷ್ಮೀಕಾಂತ ಕರ್ಕೊಳ್ಳಿ, ಉಮೇಶ್ ಶೆಲೂರು, ಪಂಪಾವತಿ ಮುಕ್ರಿ, ಶಾರದಾ ನರೇಬೈಲ್, ಗಂಗೂಬಾಯಿ ರಜಪೂತ ಮುಂತಾದವರು ಉಪಸ್ಥಿತರಿದ್ದರು.