• Slide
  Slide
  Slide
  previous arrow
  next arrow
 • ಶ್ರೀನಿಕೇತನ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

  300x250 AD

  ಶಿರಸಿ: ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀನಿಕೇತನ ಶಾಲೆ ಇಸಳೂರಿನಲ್ಲಿ ಆಗಸ್ಟ 15ರಂದು 76ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀ ರಾಜರಾಜೇಶ್ವರಿ ಸಂಸ್ಥೆಯ ಕಾರ್ಯದರ್ಶಿ ಶಿವರಾಮ ಭಟ್ ಇವರು ಧ್ವಜಾರೋಹಣ ಮಾಡಿದರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶಶಾಂಕ ಹೆಗಡೆ ಉಪಸ್ಥಿತರಿದ್ದರು.

  ಸಭಾಕಾರ್ಯಕ್ರಮದಲ್ಲಿ ಲಿಯೋ ಕ್ಲಬ್‌ನ ಸಲಹೆಗಾರರಾದ ವಿನಾಯಕ ಭಾಗ್ವತ್‌ ಮಾತನಾಡಿ ಮಕ್ಕಳು ದೇಶಪ್ರೇಮವನ್ನು ಹೊಂದುವಂತಾಗ ಬೇಕೆಂದು ಹೇಳಿದರು. ಶ್ರೀನಿಕೇತನ ಶಾಲೆಯ ಪ್ರಾಂಶುಪಾಲ ವಸಂತ್ ಭಟ್ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದ ಪಿ.ಯೂ.ಸಿ. ಪರೀಕ್ಷೆಯಲ್ಲಿ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿನಿಯರಾದ ಕುಮಾರಿ ಶಿವಾನಿ ಜೋಶಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಮತ್ತು ಕುಮಾರಿ ಅಂಜಲಿ ಉಡ್ಪೀಕರ್ ವಾಣಿಜ್ಯ ವಿಭಾಗದಲ್ಲಿ 7ನೇ ರ‍್ಯಾಂಕ್ ಪಡೆದುದರ ಸಲುವಾಗಿ ಇವರನ್ನು ಸನ್ಮಾನಿಸಲಾಯಿತು.

  300x250 AD

  ಈ ಶುಭ ಸಂದರ್ಭದಲ್ಲಿ ಲಿಯೋ ಕ್ಲಬ್ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ಶ್ರೀ ಮಾರುತಿ ಸೇವಾ ಸಂಸ್ಥೆ, ಶಿರಸಿ ಇವರು ಆಯೋಜಿಸಿದ್ದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 9ನೇ ತರಗತಿಯ ಕುಮಾರಿ ಅಪೂರ್ವ ಹೆಗಡೆ ಪ್ರಥಮ ಸ್ಥಾನ, 7ನೇ ತರಗತಿಯ ಕುಮಾರಿ ಅಭಿಜ್ಞಾ ಹೆಗಡೆ ಮತ್ತು 10ನೇ ತರಗತಿಯ ಕುಮಾರಿ ಪ್ರಣೀತಾ ಪರಂಜಪೆ ದ್ವಿತೀಯ ಸ್ಥಾನ ಹಾಗೂ ಕುಮಾರಿ ಶೃದ್ಧಾ ಹೆಗಡೆ 4ನೇ ಸ್ಥಾನವನ್ನು ಪಡೆದಿರುತ್ತಾರೆ. ಗ್ರೀನ್ ಇಂಟರೆಕ್ಟ ಕ್ಲಬ್ ವತಿಯಿಂದ ಅವಶ್ಯಕತೆ ಇರುವ ಮಕ್ಕಳಿಗೆ ನೋಟ್‌ಬುಕ್ ವಿತರಿಸಲಾಯಿತು. ಹತ್ತನೇ ತರಗತಿಯ ಕುಮಾರ ಅವ್ಯಕ್ತ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top