Slide
Slide
Slide
previous arrow
next arrow

ಮಳೆಗಾಲ ಮುಗಿಯುತ್ತಿದ್ದಂತೆ ಮರಳುಗಾರಿಕೆ ಪ್ರಾರಂಭಕ್ಕೆ ಸಿದ್ಧತೆ: ಮಂಕಾಳ ವೈದ್ಯ

300x250 AD

ಕಾರವಾರ: ಮರಳು ಕೊರತೆ ನೀಗಿಸುವ ಸಂಬoಧ ಈಗಾಗಲೇ ಮರಳು ದಿಬ್ಬಗಳನ್ನು ಗುರುತಿಸಲಾಗಿದೆ. ಸದ್ಯದಲ್ಲಿಯೇ ನ್ಯಾಯಾಲಯದಿಂದಲೂ ಮಾರ್ಗಸೂಚಿ ಬರಲಿದ್ದು, ಜನರಿಗೆ ತೊಂದರೆಯಾಗದ0ತೆ ಮಳೆಗಾಲ ಮುಗಿಯುತ್ತಿದ್ದಂತೆ ಮರಳು ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ನದಿಗಳಿಗೆ ಉಪ್ಪು ನೀರು ಹರಿಯುವಲ್ಲಿವರೆಗೂ ಸಿಆರ್‌ಜೆಡ್ ಎಂದು ಗುರುತಿಸಲಾಗುತ್ತಿದೆ. ಇದೀಗ ಮೀನುಗಾರರಿಗೆ ತೊಂದರೆಯಾಗುತ್ತಿರುವ ನಿಟ್ಟಿನಲ್ಲಿ ಮರಳು ತೆಗೆಯಲು ದಿಬ್ಬಗಳನ್ನು ಗುರುತಿಸಲಾಗಿದೆ ಎಂದರು. ಸುರಂಗ ಮಾರ್ಗಕ್ಕೆ ಈವರೆಗೂ ಸುರಕ್ಷಾ ಪ್ರಮಾಣ ಪತ್ರ ನೀಡಿಲ್ಲ. ಮುಂದೆ ಏನಾದರು ಅನಾಹುತ ಸಂಭವಿಸಿದ್ದಲ್ಲಿ ಐಆರ್‌ಬಿ ಕಂಪೆನಿಯೇ ಜವಾಬ್ದಾರಿಯಾಗಿದೆ. ರಸ್ತೆ, ಸೇತುವೆ ಎಲ್ಲವೂ ಕಳಪೆಯಾಗಿದೆ. ಕಂಪೆನಿ ಕಾಮಗಾರಿ ಪ್ರಾರಂಭಿಸಿ 9 ವರ್ಷ ಕಳೆದಿದೆ. ಇದೀಗ ಅಗ್ರಿಮೆಂಟ್ ಕೇಳಿದರೆ ನೀಡುತ್ತಿಲ್ಲ. ರಾಜ್ಯ ಸರ್ಕಾರಕ್ಕೂ ಇವರ ಯಾವುದೇ ದಾಖಲೆ ನೀಡಿಲ್ಲ. ಅವರಿಗೆ ಇಷ್ಟ ಇಲ್ಲದೆ ಇದ್ದರೇ ಬಿಟ್ಟು ಹೋಗಬಹುದು ಎಂದರು.

ಅರಣ್ಯ ಹಾಗೂ ಕಡಲತೀರ ಪ್ರದೇಶ ಹೊಂದಿರುವ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಚನೆ ಮಾಡಲಾಗಿದೆ. ಕೈಗಾರಿಕೆ ಸ್ಥಾಪನೆಗೆ ಕುಮಟಾದಲ್ಲಿ 100 ಎಕರೆ ಜಮೀನು ಮತ್ತು ಕಾರವಾರದಲ್ಲಿ 77 ಎಕರೆ ಪ್ರದೇಶ ಗುರುತಿಸಲಾಗಿದೆ. ಮುಂದಿನ ಹಂತದಲ್ಲಿ ಮತ್ತೆ 130 ಎಕರೆ ಪ್ರದೇಶ ಸೇರಿ ಪ್ರತಿ ತಾಲ್ಲೂಕುಗಳಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸಲಾಗುವುದು. ಆಸಕ್ತಿ ಇರುವ ಜಿಲ್ಲೆಯವರಿಗೆ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೆ ಬಂದರು, ನೌಕಾನೆಲೆಗೆ ಪೂರಕವಾಗಿರುವ ಬಿಡಿಭಾಗಗಳನ್ನು ಇಲ್ಲಿಯೇ ತಯಾರಿಸಲು ಕೋರಲಾಗಿದೆ. ಅವರಿಗೆ ಬೇಕಾದ ಪೂರಕ ವ್ಯವಸ್ಥೆ ಸರ್ಕಾರದಿಂದ ಕಲ್ಪಿಸುವುದಾಗಿ ತಿಳಿಸಿದರು.

300x250 AD

ಅಂಕೋಲಾದ ವಿಮಾನ ನಿಲ್ದಾಣಕ್ಕೆ ಈ ಹಿಂದಿನ ಸಚಿವರು ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚು ಭರವಸೆ ನೀಡಿದ್ದರು. ಆದರೆ ರಾಜ್ಯದಲ್ಲಿ ಸರ್ಕಾರಿ ಜಮೀನಿಗೆ ಹಣ ನಿಗದಿ ಇರುವುದರಿಂದ ವಿಮಾನ ನಿಲ್ದಾಣದ ಜಮೀನಿಗೆ ಪ್ರತ್ಯೇಕವಾಗಿ ಹಣ ನಿಗದಿ ಮಾಡಲು ಸಾಧ್ಯವಿಲ್ಲದ ಕಾರಣ ಈ ಬಗ್ಗೆ ಜನರೊಂದಿಗೆ ಮಾತುಕತೆ ನಡೆಸಲಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಜನರು ಕೂಡ ಸಹಕಾರ ನೀಡಬೇಕು ಎಂದು ಹೇಳಿದರು. ಹಣ ಇಲ್ಲದೆ ಇದ್ದರೂ ಕೂಡ ಹಿಂದಿನ ಸರ್ಕಾರ ಗುದ್ದಲಿ ಪೂಜೆ ಮಾಡಿ, ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸಲಾಗಿದೆ. ಆದರೆ ಇದೀಗ ಹಿಂದಿನ ಸರ್ಕಾರದ ಸಾಲ ತೀರಿಸಿ ಬಳಿಕ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Share This
300x250 AD
300x250 AD
300x250 AD
Back to top