ಶಿರಸಿ: 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಟಿಎಸ್ಎಸ್ ಆಸ್ಪತ್ರೆ, ಶಿರಸಿಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಇಕೋ ಕೇರ್ (ರಿ.), ಶಿರಸಿ, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ರಿ.), ಶಿರಸಿ ಘಟಕ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ : ಉತ್ತರ ಕನ್ನಡ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ TSS ಆಸ್ಪತ್ರೆಯ ಫಿಜೀಶಿಯನ್ ಮೇಜರ್ ಡಾ. ಜೆ. ಬಿ. ಕಾರಂತ್ ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ರಕ್ತದಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. TSS ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಆಫೀಸರ್ ಡಾ. ಪಿ. ಎಸ್. ಹೆಗಡೆ ಮಾತನಾಡಿ ಈ ರೀತಿಯ ಶಿಬಿರಗಳನ್ನು ಏರ್ಪಡಿಸಿ ಸಂಘಟನೆ ಮೂಲಕ ರಕ್ತದಾನ ಮಾಡುತ್ತಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ TSS ಆಸ್ಪತ್ರೆಯ ಪೆಥೋಲೋಜಿಸ್ಟ್ ಡಾ. ಸ್ವಾತಿ ನಾಡಿಗೇರ್, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ, ಶಿರಸಿ ಘಟಕದ ಅಧ್ಯಕ್ಷ ಪ್ರವೀಣ್ ಪುಳ್ಕರ್, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ, ಜಿಲ್ಲಾ ಶಾಖೆ : ಉತ್ತರ ಕನ್ನಡದ ಅಧ್ಯಕ್ಷ ಮಹೇಶ ಡಿ. ನಾಯಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇಕೋ ಕೇರ್ ಅಧ್ಯಕ್ಷರಾದ ಸುನೀಲ ಭೋವಿ, ರಾಜೇಶ್ ವೇರ್ಣೇಕರ್, ಜಗದೀಶ್ ನಾಯ್ಕ್ ಹಾಗೂ ಶಿರಸಿ ಘಟಕದ ಎಲ್ಲಾ ಮೆಡಿಕಲ್ ರೆಪ್ರಸೆಂಟೇಟಿವ್ಸ್ ಉಪಸ್ಥಿತರಿದ್ದರು. ಔಷಧ ಮಾರಾಟ ಪ್ರತಿನಿಧಿಗಳ ಸಂಘ, ಶಿರಸಿ ಘಟಕ ಕಾರ್ಯದರ್ಶಿ ರಮೇಶ್ ಬಿ. ನಾಯ್ಕ್ ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಮೆಡಿಕಲ್ ರೆಪ್ರಸೆಂಟೇಟಿವ್ ನಿತಿನ್ ಪಾಲೇಕರ್ ಹಾಗೂ ದಿನಪತ್ರಿಕೆ ವಿತರಕರಾದ ಗಣೇಶ್ ಆರ್. ಪ್ರಭು ಇವರಿಗೆ ಸನ್ಮಾನಿಸಲಾಯಿತು. ಶಿಬಿರದಲ್ಲಿ 20 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾದರು.