Slide
Slide
Slide
previous arrow
next arrow

ನನ್ನ ಮಣ್ಣು ನನ್ನ ದೇಶ ಎಂಬ ಅಭಿಮಾನ ಪ್ರತಿಯೊಬ್ಬರೂ ಹೊಂದುವಂತಾಗಬೇಕು: ಸುರೇಶ್ಚಂದ್ರಹೆಗಡೆ

300x250 AD

ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಹನುಮಂತಿಯಲ್ಲಿನ ಶೀಥಲ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಧಾರವಾಡ ಸಹಕಾರ ಹಾಲು ಒಕ್ಕೂಟದ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್‌ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ನನ್ನ ಮಣ್ಣು ನನ್ನ ದೇಶ” ಎಂಬ ಧ್ಯೇಯ ವಾಕ್ಯದೊಂದಿಗೆ ಇಂದು ನಾವು 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿವರವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಒಂದು ತಲೆಮಾರುಗಳೇ ಕಳೆದಿದೆ. ಸ್ವಾಂತತ್ರ್ಯ ನಮಗೆ ದೊರಕಿದ ಇತಿಹಾಸವನ್ನು ನಾವೇಲ್ಲರೂ ತಿಳಿದುಕೊಂಡಿದ್ದೇವೆ. ಅದರ ಜೊತೆಗೆ ನಮಗೆ ಸ್ವಾಂತತ್ರ್ಯ ದೊರಕಿಸಿಕೊಟ್ಟ ಅನೇಕ ಹೋರಾಟಗಾರರನ್ನು ನಾವು ಮರೆಯುತ್ತಿರುವುದು ದುಖಃದ ಸಂಗತಿಯಾಗಿದ್ದು ನಮಗೆ ಸ್ವಾಂತತ್ರ್ಯ ದೊರಕಿಸಿಕೊಟ್ಟ ಅಂತಹ ಅನೇಕ ಮಹನೀಯರನ್ನ ಇಂದು ನೆನೆದು ಅವರುಗಳು ಪಟ್ಟಂತಹ ಪರಿಶ್ರಮ, ಬ್ರಿಟೀಷರ ವಿರುದ್ಧ ಹೋರಾಡಿ ಎದುರಿಸಿದ ಕಷ್ಟಗಳನ್ನು, ಹಾಗೂ ನಮ್ಮ ದೇಶವನ್ನು ಪರಕೀಯರ ವಿರುದ್ಧ ಹೋರಾಡಿ ಹೇಗೆ ನಾವು ಸ್ವಾತಂತ್ರ್ಯ ಪಡೆದೆವು ಎಂಬುದನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ತಿಳಿಸಿ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯನ್ನು ಆಚರಿಸುವ ಬದಲು ದೇಶದ ಕೆಲ ನಾಗರಿಕರು ಸಾಲು ಸಾಲು ರಜೆ ಬಂದಿರುವ ಕಾರಣ ಪ್ರವಾಸಿ ತಾಣಗಳಿಗೆ ತೆರಳಿ ಮೋಜು ಮಸ್ತಿ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದ್ದು, ಇದರಿಂದ ನಮ್ಮ ಮುಂದಿನ ಪೀಳಿಗೆಯವರಿಗೆ ಉತ್ತಮ ಸಂದೇಶ ನೀಡಲು ಸಾಧ್ಯವಾಗುವುದಿಲ್ಲ. ಭಾರತದ ಮೇಲೆ ಹಲವಾರು ಬಾರಿ ಆಕ್ರಮಣಗಳು ನಡೆದಿವೆ. ಆದರೆ ಅದೆಲ್ಲವನ್ನೂ ಭಾರತ ಮೆಟ್ಟಿ ನಿಂತಿದೆ. ಸಾವಿರಾರು ವರ್ಷಗಳಿಂದಲೂ ಅದರ ಪ್ರಭಾವ ಬೀರುತ್ತಲೇ ಇದೆ. ಸ್ವಾತಂತ್ರ್ಯಕ್ಕಾಗಿ ಹಲವು ಬಲಿದಾನಗಳು ನಡೆದಿವೆ. ಭಾರತದ ಪ್ರತೀ ಹಳ್ಳಿಯ ನಾಗರೀಕರು ಇದಕ್ಕಾಗಿ ಹೋರಾಟ ಮಾಡಿದ್ದಾರೆ.

ದೇಶದ ಪ್ರತೀಯೊಬ್ಬ ನಾಗರೀಕನೂ ಸಹ ನಮಗೆ ಸ್ವಾತಂತ್ರ್ಯ ದೊರಕಿದ ಇತಿಹಾಸವನ್ನು ಮರೆಯದೇ ನಮ್ಮ ದೇಶ ಕಠಿಣ ಪರಿಸ್ಥಿತಿಗೆ ಒಳಗಾದಾಗ ನಾವು ಹೇಗೆ ಅಂತಹ ಸನ್ನಿವೇಶವನ್ನು ಎದುರಿಸಬೇಕು ಎಂಬುದನ್ನು ನಾವು ತಿಳಿಯದೇ ಹೋದರೆ ಮುಂದೊಂದು ದಿನ ಈ ಹಿಂದೆ ಎದುರಾದ ಕಷ್ಟಗಳು ಪುನರಾವರ್ತಿಸುವ ಸಾಧ್ಯತೆಗಳಿದ್ದು, ಅದಕ್ಕಾಗಿ ನಾವುಗಳು ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಗೌರವಿಸಿ ಪಾಲಿಸಿಕೊಂಡು ಹೋಗಬೇಕಿದೆ ಎಂದರು.

300x250 AD

ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ಸದ್ಯ ಪ್ರತೀದಿನ 1.20 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದ್ದು, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪ್ರತೀದಿನ ಸುಮಾರು 30 ಸಾವಿರ ಲೀಟರ್‌ನಷ್ಟು ಹಾಲಿನ ಕೊರತೆಯನ್ನು ಇಂದು ನಾವು ಎದುರಿಸುತ್ತಿದ್ದೇವೆ. ಮಾರುಕಟ್ಟೆಯ ಬೇಡಿಕೆಯನ್ನು ಸರಿದೂಗಿಸಲು ಬೇರೆ ಒಕ್ಕೂಟಗಳಿಂದ ಹಾಲನ್ನು ಖರೀದಿಸಿ ಜಿಲ್ಲೆಯ ಗ್ರಾಹಕರಿಗೆ ಪೂರೈಸುತ್ತಿದ್ದು, ಇದರಿಂದ ಒಕ್ಕೂಟಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ತಾವುಗಳು ದುಡಿಯಿತ್ತಿರುವ ಸಂಸ್ಥೆಯ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸಿ ಹಾಲು ಉತ್ಪಾದನೆಯನ್ನು ಜಿಲ್ಲೆಯಾದ್ಯಂತ ಹೆಚ್ಚು ಮಾಡಲು ಕೆಲಸ ನಿರ್ವಹಿಸಬೇಕಿದೆ ಎಂದರು. ಪ್ರತೀಯೊಬ್ಬ ಹಾಲು ಉತ್ಪಾದಕನೂ ಸಹ ಪ್ರಗತಿ ಹೊಂದುವಂತೆ ಒಕ್ಕೂಟದಿಂದ ಸಿಗುವ ಸಹಾಯ ಸೌಲಭ್ಯಗಳನ್ನು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರಿಗೆ ದೊರಕುವಂತಾಗಬೇಕು ಎಂದರು. ತಮಗೆ ಈ ನಿಟ್ಟಿನಲ್ಲಿ ಬೇಕಾದ ಎಲ್ಲಾ ಸಹಕಾರವನ್ನು ಒಕ್ಕೂಟದ ಅಧ್ಯಕ್ಷರಾದ ಶಂಕರ ವೀರಪ್ಪ ಮುಗದ ಹಾಗೂ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಸದಾ ನಿಮ್ಮ ಜೊತೆ ಇರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಪರಶುರಾಂ ವೀರಭದ್ರ ನಾಯ್ಕ, ಜಿಲ್ಲಾ ಮುಖ್ಯಸ್ಥರಾದ ಎಸ್‌.ಎಸ್‌. ಬಿಜೂರ್‌, ಸಹಾಯಕ ವ್ಯವಸ್ಥಾಪಕರಾದ ಡಾ. ವಿವೇಕ ಎಸ್‌. ಆರ್, ಡಾ. ಶಿವಗೌಡ ಬಸಗೌಡರ್‌, ಶೀತಲ ಕೇಂದ್ರದ ವ್ಯವಸ್ಥಾಪಕರಾದ ಕೃಷ್ಣ ಕೆ.ಎನ್‌, ದೇವೆಂದ್ರಕುಮಾರ, ಮಾರುಕಟ್ಟೆ ಅಧಿಕಾರಿಯಾದ ಶರಣು ಮೆಣಸಿನಕಾಯಿ, ಬಸವರಾಜ ಸೊಲೋನಿ, ವಿಸ್ತರಣಾಧಿಕಾರಿಯಾದ ಪ್ರಕಾಶ ಕೆ, ದಯಾನಂದ ಎನ್‌, ಶಿರಸಿ ಉಪವಿಭಾಗದ ಗುರುದರ್ಶನ ಭಟ್‌, ಅಭಿಷೇಕ ನಾಯ್ಕ, ಜಯಂತ ಪಟಗಾರ, ದಯಾನಂದ ಎಂ. ಬೋರ್ಕರ್‌, ಪ್ರವೀಣ ಬಳ್ಳಾರಿ ಹಾಗೂ ಶಿರಸಿ ಡೇರಿಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top