ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಪ್ರಭಾಕರ ಹೆಗಡೆ ಹುಗ್ಗಿಕೊಪ್ಪ ಧ್ವಜಾರೋಹಣ ನೆರವೇರಿಸಿದರು. ತದನಂತರ ನಡೆದ ದತ್ತಿ ನಿಧಿ ವಿತರಣಾ ಸಭಾಕಾರ್ಯಕ್ರಮದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಮಹನೀಯರುಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಇಟ್ಟ ದತ್ತಿನಿದಿಯನ್ನು 50ಕ್ಕೂ ಹೆಚ್ಚು ಮಕ್ಕಳಿಗೆ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಸಲಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಕಿರಣಾ ರಾಜೀವ್ ಭಟ್ ಮಾತನಾಡುತ್ತ ದತ್ತಿನಿದಿ ಬಡ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೋತ್ಸಾಹದಾಯಕವಾಗಿದ್ದು ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿದೆ ಎಂದು ಹೇಳಿದರು. ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀಧರ್ ನಾಯಕ್ ಎಕ್ಕಂಬಿ ಮಕ್ಕಳು ಸ್ವಾತಂತ್ರ್ಯೋತ್ಸವದ ಅರ್ಥವನ್ನು ಅರಿತು ನಮ್ಮ ದೇಶದ ಸಾಧನೆಯನ್ನು ತಿಳಿದುಕೊಂಡು ಉತ್ತಮ ಪ್ರಜೆಯಾಗಲೆಂದು ಆಶಿಸಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾಕರ್ ಹೆಗಡೆ ಹುಗ್ಗಿಕೊಪ್ಪ ದೇಶಾಭಿಮಾನ ಎಲ್ಲರಲ್ಲಿ ಮೂಡಲಿ ಅಲ್ಲದೆ ವಿದ್ಯೆ ಜೀವನದಲ್ಲಿ ಆಯುಧವಿದ್ದಂತೆ ಕಾರಣ ಉತ್ತಮ ವಿದ್ಯಾರ್ಥಿಗಳಾಗಿ ಎಂದು ಕರೆ ನೀಡಿದರು. ದತ್ತಿನಿಧಿ ಇಟ್ಟವರ ಪರವಾಗಿ ಜಿ.ವಿ. ಭಟ್ ಬಿಸಲಕೊಪ್ಪ ಮಾತನಾಡಿದರು .ಪ್ರಾರಂಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಭಟ್ ವಾನಳ್ಳಿ ಎಲ್ಲರನ್ನು ಸ್ವಾಗತಿಸಿ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು. ಶಿಕ್ಷಕ ಬಿ.ಎಂ. ಭಜಂತ್ರಿ ನಿರ್ವಹಿಸಿದರೆ, ಶ್ರೀಮತಿ ಸವಿತಾ ಭಟ್ ವಂದಿಸಿದರು ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು ಶಿಕ್ಷಕರು ಹಳೆಯ ವಿದ್ಯಾರ್ಥಿಗಳು ಮಕ್ಕಳು ಪಾಲ್ಗೊಂಡಿದ್ದರು.