• Slide
    Slide
    Slide
    previous arrow
    next arrow
  • ಲಯನ್ಸ್ ಶಾಲೆಯಲ್ಲಿ ಸಡಗರದ ಸ್ವಾತಂತ್ರೋತ್ಸವ ಆಚರಣೆ

    300x250 AD

    ಶಿರಸಿ: ನಳನಳಿಸುವ ತಳಿರು ತೋರಣ, ರಂಗು ರಂಗಿನ ರಂಗೋಲಿಗಳು ಲಯನ್ಸ್ ಶಾಲೆಯ ಪ್ರಾಂಗಣದಲ್ಲಿ 77ನೇ ಸ್ವಾತಂತ್ರ‍್ಯೋತ್ಸವಕ್ಕೆ ಸಡಗರದಿಂದ ಮುನ್ನುಡಿ ಹಾಡಿತ್ತು .

    ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು, ಶ್ವೇತ ವಸ್ತ್ರಧಾರಿಗಳಾದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪಾಲಕವೃಂದ, ಲಯನ್ಸ್ ಕ್ಲಬ್ ಸದಸ್ಯರು, ಲಯನ್ಸ್ ಶಿಕ್ಷಣ ಸಂಸ್ಥೆಯ  ಸದಸ್ಯರು, ಪಾಲಕರು ಈ ಸಮಯದಲ್ಲಿ ಉಪಸ್ಥಿತರಿದ್ದರು. ಪ್ರಸ್ತುತ ವರ್ಷದ ಲಯನ್ಸ್ ಅಧ್ಯಕ್ಷರಾದ MJF ಲಯನ್ ಅಶೋಕ್ ಹೆಗಡೆ ಧ್ವಜಾರೋಹಣ ನಡೆಸಿ, ತಮ್ಮ  ಅಧ್ಯಕ್ಷೀಯ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ನಾಗರಿಕರಾಗಿ ಬಾಳಿ,ಯಶಸ್ಸು ಸಾಧಿಸಿ ಎನ್ನುತ್ತ ಮಕ್ಕಳನ್ನು ಹುರಿದುಂಬಿಸಿದರು. ಲಯನ್ಸ ಶಾಲಾ ಸಮೂಹ ಇಂದು ಜಿಲ್ಲೆಯಲ್ಲೇ ಅತಿ ಹೆಚ್ಚು ಸೌಲಭ್ಯ ಹೊಂದಿದ್ದು ಇದರ ಬೆಳವಣಿಗೆಗೆ ಕಾರಣವಾದ ಎಲ್ಲ ಪಾಲಕರಿಗೆ ಧನ್ಯವಾದ ಹೇಳಿದರು. ಲಯನ್ಸ ಅಕಾಡೆಮಿ ಹಾಗೂ ಬೇಸ್ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಭಾಸ್ಕರ ಸ್ವಾದಿ ಮೆಮೋರಯಲ್ ಲಯನ್ಸ ಪಿ.ಯು. ಕಾಲೇಜಿನ ಸೌಲಭ್ಯಗಳನ್ನು ಹೆಚ್ಚು ಜನ ಪಡೆಯುವಂತಾಗಲಿ ಎಂದು ಕರೆ ನೀಡಿದರು.

    ಶಾಲೆಯ ದೈಹಿಕ ಶಿಕ್ಷಕರಾದ ನಾಗರಾಜ ಜೋಗ್ಳೇಕರ್, ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರ್, ಗೈಡ್ ಕ್ಯಾಪ್ಟನ್ ಚೇತನಾ ಪಾವಸ್ಕರ್ ಮುಂದಾಳತ್ವದಲ್ಲಿ ಶಿಸ್ತುಪಾಲನೆಯಲ್ಲಿ ಧ್ವಜಾರೋಹಣ ಕಾರ‍್ಯಕ್ರಮ ನಡೆಯಿತು. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿಕೊಟ್ಟರು. ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ ಹೆಗಡೆ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ವಂದೇ ಮಾತರಂ, ಧ್ವಜಗೀತೆ, ರಾಷ್ಟ್ರ ಗೀತೆ ಪ್ರಸ್ತುತಪಡಿಸಿದರು.
    ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ.ರವಿ ನಾಯಕ್ ಸ್ವಾಗತ ಮತ್ತು ಪ್ರಾಸ್ತಾವಿಕ ನಡೆಸಿದರು. ಲಯನ್ಸ್ ಶಾಲಾ ಸಮೂಹಗಳ ಪ್ರಾಂಶುಪಾಲ ಶಶಾಂಕ ಹೆಗಡೆ  ವಂದನಾರ್ಪಣೆ ನಡೆಸಿಕೊಟ್ಟರು. ಸಹಶಿಕ್ಷಕಿಯರಾದ ಶ್ರೀಮತಿ ಸಂಧ್ಯಾ ಭಟ್ ಮತ್ತು ಶ್ರೀಮತಿ ಸುಮನಾ ಹೆಗಡೆ ಕಾರ‍್ಯಕ್ರಮ ನಿರ್ವಹಿಸಿದರು.

    300x250 AD

    77ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಸ್ವಾತಂತ್ರ‍್ಯ ಹೋರಾಟ ಸೈನ್ಯ ಸೇವೆ ಹಾಗೂ ಸಾಧನೆಗಳ ವಿವರ ಹೊಂದಿದ ವಿಶೇಷ ಅಂಚೇಚೀಟಿ ಪ್ರದರ್ಶನವನ್ನು ಶಿರಸಿ ಲಯನ್ಸ ಕ್ಲಬ್, ಲಿಯೋ ಕ್ಲಬ್ ಶಿರಸಿ, ಶಿರಸಿ ಲಯನ್ಸ ಎಜುಕೆಷನ್ ಸೊಸೈಟಿ ಶಿರಸಿ ಲಯನ್ಸ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
    ಶಿರಸಿಯ ಪ್ರಖ್ಯಾತ ಅಂಚೇಚೀಟಿ ಸಂಗ್ರಾಹಕರಾದ ಪ್ರೊ. ನರಸಿಂಹ ಮೂರ್ತಿ ಮತ್ತು ಸುಬೇದಾರ್ ರಾಮು.ಇ ಅವರಿಂದ ಸಂಗ್ರಹಣೆ, ವಿವರಣೆ ಮತ್ತು ಮಾರ್ಗದರ್ಶನವನ್ನು ಆಯೋಜಿಸಲಾಗಿತ್ತು. ಶಿರಸಿ ಲಯನ್ಸ ಶಾಲೆಯ ಫಿಲಾಟಲಿ ಕ್ಲಬ್ ವಿದ್ಯಾರ್ಥಿಗಳು ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಮುಕ್ತಾ ನಾಯ್ಕ ಮಾರ್ಗದರ್ಶನದಲ್ಲಿ ಕಾರ‍್ಯಕ್ರಮ ಸಂಘಟಿಸಲಾಗಿದ್ದು, ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್‌ ಅಶೊಕ ಹೆಗಡೆ ಪ್ರದರ್ಶನವನ್ನು ಉದ್ಘಾಟಿಸಿದರು. ಶಾಲೆ, ವಿದ್ಯಾರ್ಥಿಗಳು, ಶಿಕ್ಷಕರು ಪಾಲಕವೃಂದ ಬಹು ಉತ್ಸುಕತೆಯಿಂದ ಅಂಚೆ ಚೀಟಿ ಪ್ರದರ್ಶನವನ್ನು ವೀಕ್ಷಿಸಿ ಪ್ರಯೋಜನ ಪಡೆದರು. ಒಟ್ಟಿನಲ್ಲಿ  ಒಂದು ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಣೆಗೆ ಲಯನ್ಸ್ ಶಾಲೆಯಿಂದು  ಸಾಕ್ಷಿಯಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top