Slide
Slide
Slide
previous arrow
next arrow

ಇತಿಹಾಸ ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆ ತಿಳಿಸುತ್ತದೆ: ಟಿ.ಎಸ್.ಹಳೆಮನೆ

300x250 AD

ಶಿರಸಿ: ಇತಿಹಾಸ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆಯನ್ನು ನಮಗೆ ತಿಳಿಸುತ್ತದೆ. ಅವರ ಪರಿಶ್ರಮ, ಶ್ರದ್ಧೆ, ಛಲ ಸ್ವಾತಂತ್ರ್ಯದೆಡೆಗಿನ ತುಡಿತ ನಾವು ಇಂದು  ಪ್ರಜಾಸತ್ತೆಯ ಅಡಿಯಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಕಾರಣವಾಗಿದೆ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಹೇಳಿದರು.

ಅವರು ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಿದ್ದರು.

ನಾವು ಸುರಕ್ಷಿತವಾಗಿ ನೆಮ್ಮದಿಯಿಂದ ಭಾರತದಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಸೈನಿಕರು ಪೊಲೀಸರ ಬಲಿದಾನ. ಅವರ ರಕ್ಷೆಯಿಂದಲೇ ನಾವಿಂದು ಸುರಕ್ಷಿತವಾಗಿದ್ದೇವೆ. ದೇಶಕ್ಕಾಗಿ ಅವರ ಶ್ರಮವನ್ನು ನಾವೆಂದು ನೆನಪಿನಲ್ಲಿಟ್ಟುಕೊಳ್ಳಬೇಕು, ಗೌರವಿಸಬೇಕು. ದೇಶದ ಅಭಿವೃದ್ಧಿಯ ಚಿಂತನೆಯನ್ನು ನಾವು ಮಾಡಬೇಕು. ರಾಷ್ಟ್ರೀಯತೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

300x250 AD

ಈ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಬೇಬಿ ನಾಯಕ್, ಕಾಲೇಜಿನ ಬೋಧಕ ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top