ಕಾರವಾರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಜಾವೆಲಿನ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಅಭಿನಂದನ ನಾಯ್ಕ ಪ್ರಥಮ ಸ್ಥಾನ ಗಳಿಸಿದ್ದಾರೆ.
62.5 ಮೀ. ಎಸೆಯುವ ಮೂಲಕ ಅಭಿನಂದನ್ ಈ ಸಾಧನೆ ಮಾಡಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ನಮಿತಾ ಸಾರಂಗ್ ತರಬೇತಿ ನೀಡಿದ್ದರು. ನೀರಜ್ ಛೋಪ್ರಾ 2020ರ ಟೋಕಿಯೋ ಒಲಿಪಿಂಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿದ ಸವಿನೆನಪಿಗೆ ಪ್ರತಿ ವರ್ಷ ಆ.6ರಂದು ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಪ್ರಾಚಾರ್ಯೆ ವಿದ್ಯಾ ನಾಯಕ, ಹಿರಿಯ ಪ್ರಾಧ್ಯಾಪಕರಾದ ಗೀತಾ ವಾಲೀಕರ್, ವಿಜಯಶ್ರೀ ಗಾಂವ್ಕರ್, ಜಿಮಖಾನಾ ಸಂಯೋಜಕ ತಿಪ್ಪೇಸ್ವಾಮಿ ಎ. ಶ್ಲಾಘಿಸಿದ್ದಾರೆ.