Slide
Slide
Slide
previous arrow
next arrow

ಮಂಜುಗುಣಿಯಲ್ಲಿ ಅಧಿಕಮಾಸ ಪ್ರಯುಕ್ತ ವಿಶೇಷ ಕಾರ್ಯಕ್ರಮ: ಇಲ್ಲಿದೆ ಮಾಹಿತಿ

300x250 AD

ಶಿರಸಿ: ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕಮಾಸ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಧಿಕ ಶ್ರಾವಣ ಶುದ್ಧ ದ್ವಾದಶಿ ಉಪರಿ ತ್ರಯೋದಶಿ (ಸರ್ವಸಿದ್ಧಿ ತ್ರಯೋದಶಿ) ಮಿತಿಯಲ್ಲಿ ಜು. 30, ರವಿವಾರದಂದು ಹಾಗೂ ಅಧಿಕ ಶ್ರಾವಣ ಬಹುಳ ದ್ವಾದಶಿ ಉಪರಿ ತ್ರಯೋದಶಿ (ಸರ್ವಸಿದ್ಧಿ ತ್ರಯೋದಶಿ) ಮಿತಿಯಲ್ಲಿ ಆ.13 ರವಿವಾರದಂದು, ಈ ಎರಡು ದಿನಗಳಲ್ಲಿ ಅಧಿಕ ಮಾಸದ ನಿಮಿತ್ತ ವಿಶೇಷ ಸೇವಾ ಸುಸಂದರ್ಭವನ್ನು ನೀಡಲಾಗಿದ್ದು‌, ಭಕ್ತರು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.

ಶ್ರೀ ದೇವರ ಗರ್ಭಗುಡಿಯಲ್ಲಿ ಬೆಳಿಗ್ಗೆ 8.30 ರಿಂದ ಶ್ರೀ ದೇವರ ಮೂಲಮೂರ್ತಿಗೆ ಶತಧಾರಾಕ್ಷೀರಾಭಿಷೇಕ, ನವರಂಗ ಮಂಟಪದಲ್ಲಿ ರಜತಪೀಠ (ಬೆಳ್ಳಿ ಮಂಟಪ)ದಲ್ಲಿ ಉತ್ಸವ ಮೂರ್ತಿಗೆ ವಿಷ್ಣುಸಹಸ್ರನಾಮ ಸ್ತೋತ್ರ ಮಂತ್ರಗಳಿಂದ ತುಳಸಿ ಅರ್ಚನೆ, ಮಹಾಪೂಜೆ ಹಾಗೂ ವೈಯಕ್ತಿಕ ಸಂಕಲ್ಪ ಸೇವಾ: ಬೆಳಿಗ್ಗೆ 9.30ರಿಂದ 333 ದೀಪಾರಾಧನೆ (ತುಪ್ಪದ ದೀಪ), ದೀಪ ನಮಸ್ಕಾರ, 33 ಅಪೂಪ ಪೂಜೆ ಹಾಗೂ ದಾನ, ದ್ರವ್ಯಾಂಜಲಿ (ಬೊಗಸೆ ನಾಣ್ಯ)(ಶ್ರೀ ದೇವರ ಪಾದುಕೆಗೆ ಸಮರ್ಪಣೆ) ಸೇವೆಗಳು ನಡೆಯಲಿದೆ.

300x250 AD

ಶ್ರೀ ದೇವರ ಸೇವೆ ಮಾಡಿಸುವವರು ದೇವಸ್ಥಾನದ ಕಾರ್ಯಾಲಯವನ್ನು ಆಫೀಸ್ ವೇಳೆ ಬೆಳಿಗ್ಗೆ 9.30 ರಿಂದ ರಾತ್ರಿ 8.30 ರವರೆಗೆ (Mob.: Tel:+919449742079, Tel:+919481581810) ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top