• Slide
    Slide
    Slide
    previous arrow
    next arrow
  • ಅಪಾಯಕಾರಿ ರಸ್ತೆ ತಿರುವುಗಳ ದುರಸ್ಥಿಗೆ ಆಗ್ರಹ

    300x250 AD

    ಗೋಕರ್ಣ: ಪಟ್ಟಣದಿಂದ ಪೊಲೀಸ್ ಠಾಣೆಗೆ ತೆರಳುವ ರಸ್ತೆಯು ಸಾಕಷ್ಟು ಅಪಾಯಕಾರಿ ತಿರುವುಗಳಿಂದ ಕೂಡಿದ್ದು, ಇಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಅನಾಹುತವಾಗುವ ಸಾಧ್ಯತೆಯಿದೆ. ಹೀಗಾಗಿ ಸ್ಥಳೀಯ ಗ್ರಾಮ ಪಂಚಾಯತ ಹಾಗೂ ಸಂಬಂಧಿಸಿದ ಇಲಾಖೆಯವರು ತಕ್ಷಣ ಇಂತಹ ಅಪಾಯಕಾರಿ ತಿರುವುಗಳನ್ನು ಸರಿಪಡಿಸುವಂತೆ ಜನರು ಆಗ್ರಹಿಸಿದ್ದಾರೆ.

    ಈ ರಸ್ತೆಯು ಕೇವಲ ಪೊಲೀಸ್ ಠಾಣೆಗೆ ಮಾತ್ರವಲ್ಲ. ಪುಣ್ಯಾಶ್ರಮ ಸೇರಿದಂತೆ ವಿವಿಧ ಪ್ರಮುಖ ಬೀಚ್ ಹಾಗೂ ರೆಸಾರ್ಟ್ಗಳಿಗೆ ತೆರಳುವ ರಸ್ತೆಯಾಗಿದೆ. ಗೋಕರ್ಣದ ಪ್ರಮುಖ ಸ್ಥಳಗಳಲ್ಲಿಯೇ ಈ ರೀತಿಯಾದ ಅಪಾಯಕಾರಿ ತಿರುವುಗಳು ಇರುವುದರಿಂದಾಗಿ ವಾಹನದವರು ಕೂಡ ಭಯದಿಂದಲೇ ಸಂಚರಿಸುವಂತಾಗಿದೆ. ಹೀಗಾಗಿ ಈ ಬಗ್ಗೆ ಗೋಕರ್ಣ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top