• Slide
    Slide
    Slide
    previous arrow
    next arrow
  • ಸುಭಿಕ್ಷ-ಸುರಕ್ಷ ಭಾರತಕ್ಕೆ ರಾಮರಕ್ಷೆ: ರಾಘವೇಶ್ವರ ಶ್ರೀ

    300x250 AD

    ಗೋಕರ್ಣ: ತ್ರೇತಾಯುಗದಲ್ಲಿ ಅಯೋಧ್ಯೆ ಇಡೀ ವಿಶ್ವದಲ್ಲೇ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯ ಕೇಂದ್ರವಾಗಿತ್ತು. ಅಂಥ ಸಮೃದ್ಧಿಯ ಸುಭಿಕ್ಷೆ ಮತ್ತು ಸುರಕ್ಷೆ ಭರತಭೂಮಿಗೆ ಮತ್ತೆ ಲಭ್ಯವಾಬೇಕು. ಈ ಮಹಾನ್ ರಾಷ್ಟ್ರಸಂಪತ್ತಿಗೆ ರಾಮರಕ್ಷೆ ಒದಗಿ ಬರಬೇಕು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶಿಸಿದರು.

    ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸಂಘಟನಾ ಚಾತುರ್ಮಾಸ್ಯ ಕೈಗೊಂಡಿರುವ ಪರಮಪೂಜ್ಯರು ಆಶೀರ್ವಚನ ನೀಡಿ, ಸಮೃದ್ಧಿ ಬಂದಾಗ ಸಹಜವಾಗಿಯೇ ಜವಾಬ್ದಾರಿ ಹಾಗೂ ಸುರಕ್ಷೆಯ ಹೊಣೆಯೂ ಜತೆಗೆ ಬರುತ್ತದೆ. ಸಮೃದ್ಧಿ ಬಂದಾಗ ಅದನ್ನು ಸದ್ವಿನಿಯೋಗ ಮಾಡುವುದು ಹಾಗೂ ಸುರಕ್ಷಿತವಾಗಿ ಅದು ಧರ್ಮಕಾರ್ಯಗಳಿಗೆ ವಿನಿಯೋಗವಾಗುವಂತೆ ಕಾಪಾಡುವುದು ಅಗತ್ಯ ಎಂದು ಹೇಳಿದರು.

    ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಸಮಾಜದ ಎಲ್ಲ ವರ್ಗಗಳು ಇಂದು ಶ್ರೀಮಠದ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದು, ಹವ್ಯಕ ಬಂಧುಗಳು ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

    300x250 AD

    ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ವೇಣುವಿಘ್ನೇಶ್, ಸದಸ್ಯರಾದ ರಮೇಶ್ ಹೆಗಡೆ, ಆರ್.ಜಿ.ಭಟ್ ಹೊಸಾಕುಳಿ, ಶ್ರೀಮಠದ ಆಡಳಿತ ಖಂಡದ ಶ್ರೀ ಸಂಯೋಜಕ ಪ್ರಮೋದ್ ಪಂಡಿತ್, ಚಾತುರ್ಮಾಸ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹವ್ಯಕ ಮಹಾಮಂಡಲದ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿವಿವಿ ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

    ಕುಮಟಾ ಮಂಡಲದ 200ಕ್ಕೂ ಹೆಚ್ಚು ಮಂದಿ ವೈದಿಕರು ಮತ್ತು ರುದ್ರಪಾಠಕರಿಂದ ಮಹಾರುದ್ರ ಹವನ ಸಂಪನ್ನಗೊoಡಿತು. ಕುಮಟಾ ಮಂಡಲ ವೈದಿಕ ಪ್ರಮುಖರು ಚಾತುರ್ಮಾಸ ಸಂದರ್ಭದಲ್ಲಿ ಮಹಾರುದ್ರ ಹವನ ಮಾಡುವ ಮೂಲಕ ಇತರ ಎಲ್ಲ ಮಂಡಲಗಳಿಗೆ ಮಾದರಿಯಾಗಿದ್ದಾರೆ ಎಂದು ಸ್ವಾಮೀಜಿ ಬಣ್ಣಿಸಿದರು. ಪಠ್ಯ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ 11 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top