• Slide
    Slide
    Slide
    previous arrow
    next arrow
  • ‘ಹಳೆಯ ನೆನಪುಗಳ ಸಂಗಮ- ಹೃದಯಂಗಮ’: 28 ವರ್ಷಗಳ ಬಳಿಕ ಪುನರ್ಮಿಲನಗೊಂಡ ವಿದ್ಯಾರ್ಥಿಗಳು

    300x250 AD

    ದಾಂಡೇಲಿ: ನಗರದ ಬಂಗೂರನಗರ ಮಹಾವಿದ್ಯಾಲಯದ ಕಲಾ ವಿಭಾಗದ 1993- 96ರ ಬ್ಯಾಚ್‌ನ ಪುನರ್ಮಿಲನ ಕಾರ್ಯಕ್ರಮ ‘ಹಳೆಯ ನೆನಪುಗಳ ಸಂಗಮ- ಹೃದಯಂಗಮ’ ವಿಜೃಂಭಣೆಯಿoದ ನಡೆಯಿತು.

    ಬೇರೆ ಬೇರೆ ಕಡೆಗಳಲ್ಲಿ ನಾನಾ ಉದ್ಯೋಗ, ಸರಕಾರಿ ನೌಕರಿ, ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ 28 ವರ್ಷಗಳ ಹಿಂದೆ ಕಲಿಸಿದ ಗುರುಗಳನ್ನ ಮರೆಯದ ವಿದ್ಯಾರ್ಥಿಗಳು, ದೂರದ ಮುಂಬೈ, ಬೆಂಗಳೂರು, ಗೋವಾ, ಹುಬ್ಬಳ್ಳಿ ಮತ್ತಿತರ ಕಡೆಗಳಿಂದ ಬಂಗೂರನಗರಕ್ಕೆ ಆಗಮಿಸಿ, ಗುರುವಂದನೆ ಕಾರ್ಯಕ್ರಮ ನಡೆಸಿದರು. 28 ವರ್ಷಗಳ ಹಿಂದೆ ಜ್ಞಾನದ ಬೆಳಕನ್ನು ನೀಡಿ ಉನ್ನತಿಗೆ ಕಾರಣರಾದ ತಮ್ಮ ನೆಚ್ಚಿನ ಗುರುಗಳಾದ ರಾಜ್ಯಶಾಸ್ತ್ರ ವಿಭಾಗದ ಹಾದಿಮನಿ, ಎಕಾನಾಮಿಕ್ಸ್ನ ಕರಿಯಪ್ಪ, ಇಂಗ್ಲಿಷ್ ಉಪನ್ಯಾಸಕರಾಗಿದ್ದ ಖುರ್ಷಿದಾ ಅವರಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಹಳೆ ವಿದ್ಯಾರ್ಥಿಗಳು ಧನ್ಯತಾಭಾವ ಮೆರೆದರು. ಅಗಲಿರುವ ಅಂದಿನ ಪ್ರಾಂಶುಪಾಲ ಸಭಾಹಿತ ಹಾಗೂ ಕೆಲ ಹಳೆ ವಿದ್ಯಾರ್ಥಿಗಳಿಗೆ ಮೌನಾಚರಣೆ ಸಲ್ಲಿಸಿದರು.

    300x250 AD

    ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳು ತಮ್ಮ ಹಿಂದಿನ ವಿದ್ಯಾರ್ಥಿ ಜೀವನದ ಮೇಲೆ ಮೆಲುಕು ಹಾಕುತ್ತಿದ್ದರೆ, ಇತ್ತ ನಿವೃತ್ತಿ ಹೊಂದಿದ ಗುರುಗಳು ತಮ್ಮ ಕೈಯಲ್ಲಿ ಕಲಿತು ದೊಡ್ಡವರಾಗಿ ಬೆಳೆದ ಪರಿಯನ್ನು ನೋಡಿ ಖುಷಿಪಡುತ್ತಿದ್ದರು. ವಿದ್ಯಾರ್ಥಿಗಳ ಸಾಹಸದ ಯಶೋಗಾಥೆಗೆ ಭೇಷ್ ಎಂದರು. ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಕೇಳಿ ಸಂತೋಷಪಟ್ಟರು. ಗುರುವೃತ್ತಿ ಕೈಗೊಂಡಿದ್ದಕ್ಕೆ, ಮಕ್ಕಳಿಗೆ ಜ್ಞಾನಧಾರೆ ಎರೆದಿದ್ದಕ್ಕೆ ತಮ್ಮ ಜೀವನ ಸಾರ್ಥಕ, ಪಾವನವಾಯಿತು ಎಂಬ ಭಾವ ಗುರುಬಳಗದ ಮನದಾಳದಲ್ಲಿತ್ತು. ಹಳೆ ವಿದ್ಯಾರ್ಥಿಗಳಿಗೆ ತಾವು ಕಲಿತ ಕಾಲೇಜಿನ ಬಗ್ಗೆ ಇರುವ ಗೌರವ, ಅಭಿಮಾನಕ್ಕೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top