Slide
Slide
Slide
previous arrow
next arrow

ಅರ್ಬನ್ ಕೋ- ಆಪರೇಟಿವ್ ಅಧ್ಯಕ್ಷರಾಗಿ ಧೀರೂ ಶಾನಭಾಗ ಮೂರನೇ ಬಾರಿಗೆ ಆಯ್ಕೆ

300x250 AD

ಕುಮಟಾ: ಇಲ್ಲಿನ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಧೀರೂ ಶಾನಭಾಗ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ನೂತನ ಉಪಾಧ್ಯಕ್ಷರಾಗಿ ಪ್ರಶಾಂತ ನಾಯ್ಕ ಆಯ್ಕೆಯಾಗಿದ್ದಾರೆ.

ಕುಮಟಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ 13 ನಿರ್ದೇಶಕರುಗಳ ಸ್ಥಾನಗಳಿಗೆ ಇತ್ತೀಚೆಗೆ ಅವಿರೋಧ ಆಯ್ಕೆ ನಡೆದಿತ್ತು. ಸೋಮವಾರ ಬ್ಯಾಂಕ್ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಧೀರೂ ಶಾನಭಾಗ ಅವರನ್ನು ಸರ್ವ ನಿರ್ದೇಶಕರ ಸಮ್ಮತಿ ಮೇರೆಗೆ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರಶಾಂತ ನಾಯ್ಕ ದೇವರಹಕ್ಕಲ ಅವರು ಸರ್ವಾನುಮತದಿಂದ ಆಯ್ಕೆಯಾದರು.

300x250 AD

ಈ ಸಂದರ್ಭದಲ್ಲಿ ಬ್ಯಾಂಕ್‌ನ ನಿರ್ದೇಶಕರಾದ ಮುಕುಂದ ಶಾನಭಾಗ, ಸದಾನಂದ ಕಾಮತ್, ಅಶೋಕ ಶಾನಭಾಗ, ಚಂದ್ರಕಾ0ತ ಶಾನಭಾಗ, ರಾಘವೇಂದ್ರ ನಾಯಕ, ಜಯವಂತ ನಾಯ್ಕ, ಲೀಲಾವತಿ ಭಂಡಾರಿ, ವಸಂತ ಹುಲಸ್ವಾರ್, ಸುನೀತಾ ಕಾಮತ್, ಸುಧಾ ಗೌಡ, ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಪ್ರದೀಪ ಪೈ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top