Slide
Slide
Slide
previous arrow
next arrow

ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ವರ್ಗಾವಣೆ; ಬೀಳ್ಕೊಡುಗೆ

300x250 AD

ಅಂಕೋಲಾ: ತಾಲೂಕಿನ ಅಬಕಾರಿ ಇಲಾಖೆಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದ ಅಬಕಾರಿ ನಿರೀಕ್ಷಕ ರಾಹುಲ ನಾಯಕ ವರ್ಗಾವಣೆ ಹೊಂದಿದ್ದರಿoದ ಅಂಕೋಲಾ ಫೌಂಡೇಶನ್‌ನ ಸರ್ವ ಸದಸ್ಯರು ಬೀಳ್ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಬೀನಾ ವೈನ್ ಶಾಪ್, ಶಾಂತಿಕಾ ವೈನ್ ಶಾಪ್, ಜನಪ್ರಿಯ ವೈನ್ ಶಾಪ್‌ಗಳ ಮಾಲೀಕರು ಸನ್ಮಾನಿಸಿ ಗೌರವಿಸಿದರು. ಪಿಎಸೈ ಉದ್ದಪ್ಪ ಧರೆಪ್ಪನವರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ವಕೀಲ ನಾಗರಾಜ ನಾಯಕ, ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಅಡ್ಲೂರ್, ಅಂಕೋಲಾ ಫೌಂಡೇಶನ್ ಅಧ್ಯಕ್ಷ ಮತೀನ್ ಶೇಖ್ ವರ್ಗಾವಣೆಗೊಂಡ ಅಧಿಕಾರಿಗೆ ಶುಭ ಕೊರುವುದರೊಂದಿಗೆ ಮುಂದಿನ ದಿನಗಳಲ್ಲಿ ಸೇವಾ ಬಡ್ತಿಯೊಂದಿಗೆ ಇನ್ನೂ ಉನ್ನತ ಸ್ಥಾನಕ್ಕೆ ಏರಿ, ಇದೇ ತಾಲೂಕಿಗೆ ಮತ್ತೊಮ್ಮೆ ಬನ್ನಿ ಎಂದು ಹಾರೈಸಿದರು.

ಇದೇ ಇಲಾಖೆಯಿಂದ ಜೊಯಿಡಾ ತಾಲೂಕಿಗೆ ವರ್ಗಾವಣೆಗೊಂಡ ಸಹ ಸಿಬ್ಬಂದಿ ಶ್ರೀಶೈಲ ಹಾಗೂ ಈರಣ್ಣ ಅವರನ್ನು ಸಹ ಜೊತೆ ಸನ್ಮಾನಿಸಿ ಗೌರವಿಸುವುದರ ಮೂಲಕ ಶುಭ ಕೋರಲಾಯಿತು. ಸನ್ಮಾನ ಸ್ವೀಕರಿಸಿದ ಅಬಕಾರಿ ನಿರೀಕ್ಷಕ ರಾಹುಲ ನಾಯಕ ಇಲಾಖೆಯಲ್ಲಿ ದಕ್ಷ ಆಡಳಿತದ ಮೂಲಕ ಉತ್ತಮ ಸೇವೆ ಒದಗಿಸಿದ ಅಧಿಕಾರಿಗಳನ್ನು ಗುರುತಿಸಿ ಹುರಿದುಂಬಿಸುವ ಮಹತ್ಕಾರ್ಯ ಮಾಡುತ್ತಿರುವ ಅಂಕೋಲಾ ಫೌಂಡೇಶನ್‌ಗೆ ನಾನು ಚಿರಋಣಿ. ಅಂಕೋಲಾದ ಜನತೆ ನೀಡಿದ ಸಹಾಯ ಸಹಕಾರ ಎಂದಿಗೂ ಮರೆಯುವುದಿಲ್ಲ ಎಂದರು.

300x250 AD

ಅಬಕಾರಿ ಉಪನಿರೀಕ್ಷಕಿ ಮಥುರಾ ದಾಸ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ಪತ್ರಕರ್ತ ನಾಗರಾಜ ಜಾಂಬಳೇಕರ್ ವೇದಿಕೆಯಲ್ಲಿದ್ದರು. ಪತ್ರಕರ್ತ ಸುಭಾಷ್ ಕಾೆ್ರಬೈಲ್ ಸ್ವಾಗತಿಸಿ ನಿರೂಪಿಸಿದರು. ರಾಘು ಕಾಕರಮಠ ಪ್ರಾಸ್ತಾವಿಕ ಮಾತನಾಡಿದರು. ಅರುಣ್ ಶೆಟ್ಟಿ ವಂದಿಸಿದರು. ಪತ್ರಕರ್ತ ದಿನಕರ ನಾಯ್ಕ, ವಿನಾಯಕ, ಅಬಕಾರಿ ಇಲಾಖೆಯ ಇತರ ಸಿಬ್ಬಂದಿಗಳು ಮತ್ತು ಸಮಾನ ಮನಸ್ಕ ಸ್ನೇಹಿತ ಬಳಗದವರು ಇದ್ದರು.

Share This
300x250 AD
300x250 AD
300x250 AD
Back to top