• Slide
    Slide
    Slide
    previous arrow
    next arrow
  • ಇಸಳೂರು ಶಾಲೆಗೆ ಲಕ್ಷ ರೂ. ದೇಣಿಗೆ ನೀಡಿದ ಪ್ರಭಾಕರರಾವ್ ಮಂಗಳೂರು

    300x250 AD

    ಶಿರಸಿ: ತಾಲೂಕಿನ ಇಸಳೂರು ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ್ದ ಪ್ರಭಾಕರರಾವ್ ಮಂಗಳೂರು ಅವರು ಶಾಲೆಯ ಶುಚಿತ್ವ, ಶಿಸ್ತು, ಗುಣಮಟ್ಟ ಶಿಕ್ಷಣವನ್ನು ಅವಲೋಕಿಸಿ ಸರಕಾರಿ ಶಾಲೆಯ ಭೌತಿಕ ಅಭಿವೃದ್ಧಿಗೆ ರೂ ಒಂದು ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ.

    ಪ್ರತಿ ವರ್ಷವು ಭೇಟಿ ನೀಡುತ್ತಿರುವ ಇವರು ಕಳೆದ ಸಾಲಿನಲ್ಲಿ 50,000 ರೂ. ಮೌಲ್ಯದ ಪ್ರತಿ ತರಗತಿಗೆ ಗ್ರೀನ್ ಬೋರ್ಡ್ ಮತ್ತು ಪ್ರಯೋಗಾಲಯಕ್ಕೆ ವಿದ್ಯುತ್ ಸಂಪರ್ಕ ಜೋಡಣೆಗೆ ಸಹಾಯಧನ ನೀಡಿದ್ದರು. ಇದಕ್ಕೆ ಸಹಕರಿಸಿ ದುಶ್ಯಂತರಾಜ ಕೊಲ್ಲೂರಿಯವರಿಗೂ ಮತ್ತು ಆರ್ಥಿಕ ಸಹಾಯ ನೀಡಿದ ಪ್ರಭಾಕರರಾವ್ ಅವರಿಗೆ ಶಾಲಾಭಿವೃದ್ಧಿ ಸಮಿತಿ, ಮುಖ್ಯಾಧ್ಯಾಪಕರು, ಶಿಕ್ಷಕವೃಂದ, ಪಾಲಕರು, ವಿದ್ಯಾರ್ಥಿಗಳಿಂದ ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top