Slide
Slide
Slide
previous arrow
next arrow

ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ತಮ್ಮಣ್ಣ ಭಟ್ಟ್ ನಿಧನ

300x250 AD

ಹೊನ್ನಾವರ: ವೈದ್ಯರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ತಮ್ಮಣ್ಣ ಭಟ್ಟ್ (ಡಾ.ಟಿ.ವಿ.ಭಟ್) (87) ಕವಲಕ್ಕಿ ತಮ್ಮ ಧಾರೇಶ್ವರದ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೂಲತಃ ಸಿದ್ದಾಪುರ ತಾಲೂಕು ಹೆಗ್ಗರಣಿ ಉಂಚಳ್ಳಿಯವರಾದ ಅವರು ಹೆಗ್ಗರಣಿಯಲ್ಲಿ ವೈದ್ಯರಾಗಿ ವೃತ್ತಿ ಜೀವನ ಪ್ರಾರಂಭಿಸಿ, ನಂತರ ತಾಲೂಕಿನಲ್ಲಿ ಕವಲಕ್ಕಿಯಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಮಗ ಲಕ್ಷ್ಮೀಶ ಮತ್ತು ಸೊಸೆ ಕವಲಕ್ಕಿ ಮತ್ತು ಧಾರೆಶ್ವರದಲ್ಲಿ ವೈದ್ಯಕೀಯ ಪರಂಪರೆ ಮುಂದುವರೆಸಿದ್ದರು. ಬಿಜೆಪಿ ಹಿರಿಯ ನಾಯಕರಾದ ಡಾ.ಚಿತ್ತರಂಜನ್ ಮತ್ತು ಡಾ.ಎಂ.ಪಿ.ಕರ್ಕಿಯವರ ನಿಕಟವರ್ತಿಯಾಗಿದ್ದ ಅವರು, ಅತ್ಯಂತ ಸ್ನೇಹಜೀವಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

300x250 AD

ಇವರ ನಿಧನಕ್ಕೆ ಶಾಸಕ ದಿನಕರ ಶೆಟ್ಟಿ, ಶ್ರೀಕುಮಾರ ಸಮೂಹ ಸಂಸ್ಥೆಯ ಮಾಲಕ ವೆಂಕ್ರಟಮಣ ಹೆಗಡೆ ಕವಲಕ್ಕಿ, ಆರ್.ಎಸ್.ಎಸ್ ಸಂಘಟನೆಯ ಪ್ರಮುಖರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top