Slide
Slide
Slide
previous arrow
next arrow

ಬೌದ್ಧಿಕ ಆಸ್ತಿಯ ಹಕ್ಕುಗಳು ಕಾರ್ಯಾಗಾರ; ‘ಲೈಟ್ ಇನ್ ಡಾರ್ಕ್ನೆಸ್’ ಲೋಕಾರ್ಪಣೆ

300x250 AD

ಹಳಿಯಾಳ: ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ- ರಾಜ್ಯಶಾಸ್ತ್ರ ವಿಭಾಗ, ಕನ್ನಡ- ಹಿಂದಿ ಹಾಗೂ ಇಂಗ್ಲೀಷ್ ಭಾಷಾ ವಿಭಾಗಗಳ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ (ಐಕ್ಯೂಎಸ್ಸಿ) ಸಂಯುಕ್ತಾಶ್ರಯದಲ್ಲಿ ವಕೀಲರ ಸಂಘದ ಸಹಯೋಗದೊಂದಿಗೆ ಒಂದು ದಿನದ ‘ಬೌದ್ಧಿಕ ಆಸ್ತಿಯ ಹಕ್ಕುಗಳು’ (ಐಪಿಆರ್) ಕಾರ್ಯಾಗಾರ, ಜೊತೆಗೆ ಈ ಹಿಂದೆ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕೀರಣ ಸಂಶೋಧನಾ ಬಿಡಿಲೇಖನಗಳ ಸಂಕಲಿತ ಪುಸ್ತಕ (ಐಎಸ್‌ಎಸ್ ಬಿಎನ್) ‘ಲೈಟ್ ಇನ್ ಡಾರ್ಕ್ನೆಸ್’ (ಕತ್ತಲಿನಿಂದ ಬೆಳಕಿನಡೆಗೆ) ಲೋಕಾರ್ಪಣೆ ಸಮಾರಂಭ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ಈ ಕಾರ್ಯಕ್ರಮವು ಗುರುವಿನ ನಾಮಸ್ಮರಣೆಯ ಮೂಲಕ ಅತ್ಯಂತ ಸುಶ್ರಾವ್ಯವಾಗಿ ಪ್ರಾರ್ಥನಾಗೀತೆಯನ್ನು ಹಾಡುವ ಮೂಲಕ ಸಾಹಿರಾಬಾನು ಹಾಗೂ ಪ್ರತಿಭಾ ಸಂಗಡಿಗರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಾಗಾರಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು, ಸಂಪನ್ಮೂಲ ವ್ಯಕ್ತಿಗಳನ್ನು (ಐಕ್ಯೂಎಸ್ಸಿ) ಸಹ ಸಂಚಾಲಕರಾದ ಡಾ.ಧನರಾಜ ಕಂಡೂರ ಅವರು ಪರಿಚಯಿಸಿ ಸ್ವಾಗತಿಸಿದರು. ಕಾನೂನಿನ ಅಡಿಯಲ್ಲಿ ಸಿಗಬೇಕಾದ ಪ್ರಯೋಜನ ಐಪಿಆರ್ ಮಹತ್ವವೇನು ಅದರ ವಿಭಿನ್ನ ಆಯಾಮಗಳ ಹಿನ್ನಲೆ ಕುರಿತಾಗಿ ಪ್ರಾಸ್ತಾವಿಕ ನುಡಿಯನ್ನು (ಐಕ್ಯೂಎಸ್ಸಿ) ಸಂಚಾಲಕರಾದ ಡಾ. ಸಂಗೀತಾ ಕಟ್ಟಿಮನಿಯವರು ಮಾತನಾಡಿದರು. ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀಮತಿ ಸುಮಂಗಲಾ ಅಂಗಡಿ, ಮಂಜುನಾಥ ಮಾದರ ಹಾಗೂ ಕಾಲೇಜಿನ ಪ್ರಾಂಶುಪಾಲರು ಮತ್ತು ವೇದಿಕೆಯ ಮೇಲಿರುವ ಗಣ್ಯಮಾನ್ಯರು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸುಮಂಗಲಾ ಅಂಗಡಿಯವರು ‘ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ’ ಎಂಬoತೆ ‘ಲೈಟ್ ಇನ್ ಡಾರ್ಕ್ನೆಸ್’ (ಕತ್ತಲಿನಿಂದ ಬೆಳಕಿನೆಡೆಗೆ) ಲೇಖನಗಳ ಸಂಚಿಕೆಯನ್ನು ಕುರಿತು ಅತ್ಯಂತ ಅಚ್ಚುಕಟ್ಟಾಗಿ ತಮ್ಮ ಪ್ರಾದೇಶಿಕ ನೆಲೆಗಟ್ಟಿನ ಮೇಲೆ ತಮ್ಮ ಭಾಷಾ ನಿಲುವುಗಳನ್ನು ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು. ಜ್ಞಾನದ ಹಸಿವನ್ನು ನೀಗಿಸುವ ಬಗೆಯನ್ನು ವಿಮಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಚಂದ್ರಶೇಖರ ಲಮಾಣಿಯವರು ಐಪಿಆರ್ ಕಾರ್ಯಾಗಾರದ ಆಯೋಜನೆಯ ಮಹತ್ವವನ್ನು ತಿಳಿಸಿದರು.
ಆಯೋಜಿಸಲಾದ ಕಾರ್ಯಾಗಾರದಲ್ಲಿ ಒಟ್ಟು 5 ತಾಂತ್ರಿಕ ಗೋಷ್ಠಿಗಳಿದ್ದು, ಪ್ರಥಮ ಗೋಷ್ಠಿಯಲ್ಲಿ ಡಾ. ಸಂಗೀತಾ ಕಟ್ಟಿಮನಿಯವರು ಐಪಿಆರ್ ಐತಿಹಾಸಿಕ ಬೆಳವಣಿಗೆ ಕುರಿತು ಬೆಳಕು ಚೆಲ್ಲಿದರು. ಮುಂದುವರೆದು ಮತ್ತೊರ್ವ ಸಂಪನ್ಮೂಲ ವ್ಯಕ್ತಿ ಶ್ರೀಮತಿ, ಸುಮಂಗಲಾ ಅಂಗಡಿಯವರು ಐಪಿಆರ್ ಬೌದ್ದಿಕ ಹಕ್ಕುಗಳ ಮಹತ್ವವನ್ನು ಕುರಿತು ತಮ್ಮ ತಾಂತ್ರಿಕ ಗೋಷ್ಠಿಯಲ್ಲಿ ವಿವರಿಸಿದರು. ಹಳಿಯಾಳದ ವಕೀಲರು ಹಾಗೂ ಕಾನೂನಿನ ಸಲಹೆಗಾರರಾಗಿ ಆಗಮಿಸಿ 3ನೇ ಗೋಷ್ಠಿಯಲ್ಲಿ ಮಾತನಾಡಿದ ಶ್ರೀ. ಮಂಜುನಾಥ ಮಾದರ ಅವರು ‘ಬೌದ್ಧಿಕ ಹಕ್ಕುಗಳ ಪ್ರಕಾರಗಳ ಕುರಿತು ವಿಶ್ಲೇಷಿಸಿದರು. 4ನೇ ಗೋಷ್ಠಿಯಲ್ಲಿ ಡಾ.ಧನರಾಜ ಕಂದೂರ ಅವರು ಕಾಪಿರೈಟ್ ಅದರ ಮಹತ್ವ ಮತ್ತು ಪ್ರಸ್ತುತತೆ ಮೇಲೆ ಮಾತನಾಡಿದರು.
ಕಾಲೇಜಿನ ಗ್ರಂಥಪಾಲಕರಾದ ಡಾ.ಮಂಜುನಾಥ ಲಮಾಣಿ ‘ಪೇಟೆಂಟ್ ಸ್ಟ್ಯಾಂಡರ್ಡ್ಸ್, ಟ್ರೇಡ್‌ಮಾರ್ಕ್ಸ್ ಮತ್ತು ಜಿಯೋಗ್ರಫಿಕಲ್ ಇಂಡಿಕೇಶನ್‌ಗಳ ಮಹತ್ವ’ದ ಕುರಿತು ಮಾತನಾಡಿದರು. ಕಾರ್ಯಾಗಾರದ ಕೊನೆಯ ಗೋಷ್ಠಿಯಲ್ಲಿ ಪಾಧ್ಯಾಪಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಾ. ಅನ್ನಪೂರ್ಣ ಪಾಟೀಲ ಪ್ರಸ್ತುತ ದಿನಮಾನದಲ್ಲಿ ಐಪಿಆರ್ ಕುರಿತ ಜ್ಞಾನವು ಅತೀ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಶೈಕ್ಷಣಿಕ ವಲಯದಲ್ಲಿ ಮೇಲಿಂದ ಮೇಲೆ ಆಯೋಜಿಸುವ ಮೂಲಕ ಕಾಪಿರೈಟ್‌ನ ಜಾಗೃತಿ ಮೂಡಿಸಲು ಸಲಹೆ ನೀಡಿದರು. ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರು ಈ ಕಾರ್ಯಾಗಾರದ 5, ತಾಂತ್ರಿಕ ಗೋಷ್ಠಿಗಳಲ್ಲಿ ಯೋಚಿತ ವಿಷಯಗಳು ಐಪಿಆರ್ ಕುರಿತು ಸೂಕ್ತ ಜ್ಞಾನ ನೀಡಿ, ಅರಿವು ಮೂಡಿಸುವಲ್ಲಿ ಒಂದು ದಿನದ ಕಾರ್ಯಾಗಾರ ಯಶಸ್ವಿಯಾಯಿತೆಂದು ಸಂತಸ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಇಂತಹ ಅದ್ಭುತವಾದ ಕಾರ್ಯಾಗಾರಗಳು ನಿರಂತರವಾಗಿ ನಡೆಯಲೆಂದು ಆಶಿಸಿದರು.
ಡಾ.ಪರಮಾನಂದ ದಾಸರ ನಿರೂಪಿಸಿದರು. ವಹೀದಾ ದಾವೂದಜಿ ವಂದಿಸಿದರು. ಬಿಎ ಅಂತಿಮ ವರ್ಷದ ರಾಜ್ಯಶಾಸ್ತ್ರ ವಿಷಯದ ವಿದ್ಯಾರ್ಥಿಗಳು ಸದರಿ ಕಾರ್ಯಾಗಾರದಲ್ಲಿ ಭಾಗವಹಿಸುವುದರ ಮೂಲಕ ಸದುಪಯೋಗಪಡಿಸಿಕೊಂಡರು. ಕಾಲೇಜಿನ ಸಮಸ್ತ ಸಿಬ್ಬಂದಿಯವರು. ಸಕ್ರಿಯವಾಗಿ ಭಾಗವಹಿಸುವದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top