ಮುಂಡಗೋಡ: ಸರಕಾರದ ಮಾನದಂಡದ ಪ್ರಕಾರ ಪ್ಲಾಸ್ಟಿಕ್ ಪರಿಕರಗಳನ್ನು ಮಾರಾಟ ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ವಸ್ತುಗಳನ್ನು ಹಾಕಿಕೊಡುವುದನ್ನ ನಿಷೇಧಿಸಲಾಗಿದ್ದರೂ ಅದರ ಬಳಕೆಯನ್ನು ಮುಂದುವರಿಸಿದ್ದ ಅಂಗಡಿಗಳ ಮೇಲೆ ಪಟ್ಟಣ ಪಂಚಾಯತ್ ಅಧಿಕಾರಿಗಳು ದಾಳಿ ನಡೆಸಿದರು.
ಮುಖ್ಯಾಧಿಕಾರಿ ಚಂದ್ರಶೇಖರ ಸೂಚನೆ ಮೇರೆಗೆ ಸಿಬ್ಬಂದಿ ಪ್ರದೀಪ ಹೆಗಡೆ, ವಿವೇಕ ಪಾಟೀಲ, ಅರ್ಜುನ ಬೆಂಡಲಗಟ್ಟಿ ಹಾಗೂ ಪೌರಕಾರ್ಮಿಕರು ಬಸವನಬೀದಿ ಹಾಗೂ ಯಲ್ಲಾಪುರ ರಸ್ತೆಯ ಪ್ಲಾಸ್ಟಿಕ್ ವ್ಯವಹಾರ ಮಾಡುವ ಅಂಗಡಿಗಳ ಮೇಲೆ ದಾಳಿ ಅಂಗಡಿಗಳಿ0ದ 58 ಕೆಜಿ ಪ್ಲಾಸ್ಟಿಕ್ ಜಪ್ತು ಮಾಡಿಕೊಂಡಿದ್ದು, ದಂಡದ ರೂಪವಾಗಿ 5500 ರೂ. ಆಕರಣೆ ಮಾಡಿದ್ದಾರೆ. ಮುಂದೆಯು ಈ ಕಾರ್ಯ ನಿರಂತವಾಗಿ ಮುಂದುವರೆಯುತ್ತದೆ ಎಂದು ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ತಿಳಿಸಿದ್ದಾರೆ.