Slide
Slide
Slide
previous arrow
next arrow

ಜಾನುವಾರು ಮಾಲಿಕನಿಗೆ ಪರಿಹಾರದ ಚೆಕ್ ಹಸ್ತಾಂತರ

300x250 AD

ಮುಂಡಗೋಡ: ಕೊಟ್ಟಿಗೆಗೆ ಬೆಂಕಿ ಬಿದ್ದು 7 ದನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನುವಾರು ಮಾಲಕನಿಗೆ ಕೆಡಿಸಿಸಿ ಬ್ಯಾಂಕ್‌ನ ರೈತ ಕಲ್ಯಾಣ ನಿಧಿಯಿಂದ ಶಾಸಕ ಶಿವರಾಮ ಹೆಬ್ಬಾರ್ ಬುಧವಾರ 1 ಲಕ್ಷ ರೂ. ಪರಿಹಾರ ನೀಡಿದ್ದಾರೆ.

ಪಟ್ಟಣದ ಹಳೂರ ಓಣಿಯಲ್ಲಿ ವಿದ್ಯುತ್ ಅವಘಡದಿಂದ ದನದ ಕೊಟ್ಟಿಗೆ ಭಸ್ಮಗೊಂಡು, ಕೊಟ್ಟಿಗೆಯಲ್ಲಿದ್ದ 7 ದನಗಳು ಮೃತಪಟ್ಟಿತ್ತು. ಅದರಂತೆ ಸಂತ್ರಸ್ತ ಮಾಲೀಕನ ಮನೆಗೆ ತೆರಳಿದ ರೈತನಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಶಾಸಕ ಹೆಬ್ಬಾರ್, ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಶಂಕರ ಗೌಡಿ, ವಿವೇಕ ಹೆಬ್ಬಾರ್, ಗುಡ್ಡಪ್ಪ ಕಾತೂರ, ಗುರು ಕಾಮತ, ಶೇಖರ ಲಮಾಣಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಶಿವರಾಜ ಸುಬ್ಬಾಯವರ ಇದ್ದರು.

300x250 AD
Share This
300x250 AD
300x250 AD
300x250 AD
Back to top