• Slide
    Slide
    Slide
    previous arrow
    next arrow
  • ಜಪಾನ್‌ನಲ್ಲಿ ಅಂತರಾಷ್ಟ್ರೀಯ ವಿಜ್ಞಾನಮೇಳ: ಗಣೇಶನಗರ ಪ್ರೌಢಶಾಲೆ ವಿದ್ಯಾರ್ಥಿಗಳು ಆಯ್ಕೆ

    300x250 AD

    ಶಿರಸಿ: ರಾಷ್ಟ್ರಮಟ್ಟದ ಇನ್‌ಸ್ಪಾಯರ್ ಅವಾರ್ಡ ಪ್ರಶಸ್ತಿಗಳಿಸಿದ ಇಲ್ಲಿನ ಸರಕಾರಿ ಪ್ರೌಢಶಾಲೆ ಗಣೇಶನಗರದ ವಿದ್ಯಾರ್ಥಿಗಳಾದ ಧನ್ಯಾ ಆಚಾರಿ ಮತ್ತು ಸಾಯಿನಾಥ ಮಾಲದಕರ ಇವರುಗಳು ಮುಂಬರುವ ನವೆಂಬರ 5 ರಿಂದ 11 ರವರೆಗೆ ಜಪಾನ್‌ದಲ್ಲಿ ನಡೆಯುವ ಅಂತರಾಷ್ಟ್ರೀಯ ವಿಜ್ಞಾನಮೇಳದಲ್ಲಿ ಮಾರ್ಗದರ್ಶಿ ಶಿಕ್ಷಕರಾದ ಕೆ.ಎಲ್.ಭಟ್ಟರವರೊಂದಿಗೆ ಪಾಲ್ಗೊಳ್ಳಲಿದ್ದಾರೆ. ಇವರು ಕಳೆದ ಏಪ್ರೀಲ್‌ನಲ್ಲಿ ರಾಷ್ಟ್ರಪತಿಭವನದಲ್ಲಿ ನಡೆದ ಪೈನ್ ವಿಜ್ಞಾನಮೇಳದಲ್ಲಿ ಭಾಗವಹಿಸಿ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಅಭಿನಂದನೆ ಪಡೆದಿದ್ದಾರೆ.

    ಧನ್ಯಾ ಆಚಾರಿ “ಸುಲಭದಲ್ಲಿ ಗೇರುಬೀಜ ಒಡೆಯುವ ಸಾಧನ” ಮತ್ತು ಸಾಯಿನಾಥ ಮಾಲದಕರ “ಗಾರ್ಡನ್‌ನಲ್ಲಿ ಗಿಡಗಳಿಗೆ ಕುಳಿ ತೆಗೆಯುವ ಸಾಧನ” ತಯಾರಿಸಿದ್ದರು. ಇವರು ಅತ್ಯಂತ ಬಡಕೂಲಿಕಾರ್ಮಿಕ ಮತ್ತು ಮೂಲಸೌಲಭ್ಯಗಳ ಕೊರತೆಯಿರುವ ಮಕ್ಕಳಾಗಿರುವುದು ತುಂಬಾ ವಿಶೇಷ. ಈ ಮಕ್ಕಳಿಗೆ ತರಬೇತಿ ನೀಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ವಿಜ್ಞಾನ ಶಿಕ್ಷಕ ಕೆ.ಎಲ್.ಭಟ್ಟರವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಅಭಿಷೇಕ್ ನಾಯ್ಕ ತಾಂತ್ರಿಕ ನೆರವು ನೀಡಿದ್ದಾರೆ. ಈ ಸಾಧನೆಗೆ ಕಾರಣರಾದ ಎಲ್ಲರನ್ನು ಉಪನಿರ್ದೇಶಕರಾದ ಪಿ.ಪಾರಿಬಸಪ್ಪ, ಕುಮಟಾ ಡಯಟ್ ಪ್ರಾಂಶುಪಾಲ ಎನ್.ಜಿ.ನಾಯಕ, ಶಿರಸಿ ಡಯಟ್ ಪ್ರಾಂಶುಪಾಲರಾದ ಕಲ್ಪನಾ ಶೆಟ್ಟಿ, ಶಿರಸಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ನಾಗರಾಜ ನಾಯ್ಕ, ಹುತ್ಗಾರ ಪಂಚಾಯತ ಅಧ್ಯಕ್ಷೆ ಹೇಮಲತಾ ಮಡಿವಾಳ ಮತ್ತು ಸದಸ್ಯರು, ಶಿರಸಿ ನಗರಸಭೆ ಸದಸ್ಯರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪ್ರಕಾಶ ಆಚಾರಿ, ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಮತ್ತು ಶಿಕ್ಷಕವೃಂದವರು ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top