ಶಿರಸಿ: ಕ್ಯಾನ್ಸರ್ ತಜ್ಞರಿಂದ ಕ್ಯಾನ್ಸರ್- ವೈದ್ಯಕೀಯ ಶಿಬಿರವನ್ನ ಆ.12, ಶನಿವಾರ, ಮುಂಜಾನೆ 10 ಗಂಟೆಗೆ, ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸ್ಪಂದನಾ ಗ್ರಾಮೀಣಾಭಿವೃದ್ಧಿ ವೇದಿಕೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಫಂದನಾ ಗ್ರಾಮೀಣಾಭಿವೃದ್ಧಿ ವೇದಿಕೆಯು, ಸಿಟಿ ಯೂನಿಯನ್ ಕ್ರೇಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ಆಶ್ರಯದಲ್ಲಿ ಜಸ್ಟಿಸ್ ಕೆ.ಎಸ್ ಹೆಗ್ಗಡೆ, ಚಾರಿಟೇಬಲ್ ಹಾಸ್ಪಿಟಲ್, ಮಂಗಳೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾಗೃತ ಶಿಬಿರದಲ್ಲಿ ವೈದ್ಯಕೀಯ ಮಾಹಿತಿಯನ್ನ ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ವಿನಯ್ ಕುಮಾರ್ ಜೆ ರಾಜೇಂದ್ರ, ಮಂಗಳೂರು ಅವರು ನೀಡಲಿದ್ದು, ಶಿಬಿರದ ಉದ್ಘಾಟನೆಯನ್ನ ಹಿರಿಯ ಪತ್ರಕರ್ತೆ ಹಾಗೂ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ ಕೃಷ್ಣಿ ಶಿರೂರ ಹುಬ್ಬಳ್ಳಿ ನೇರವೆರಿಸುವರೆಂದು ತಿಳಿಸಲಾಗಿದೆ.
ಕ್ಯಾನ್ಸರ್ ಜಾಗೃತ ಶಿಬಿರದಲ್ಲಿ ಕ್ಯಾನ್ಸರ್ ಬರಲು ಕಾರಣಗಳೇನು, ಕ್ಯಾನ್ಸರ್ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಮತ್ತು ಕ್ಯಾನ್ಸರ್ ಸಂಪೂರ್ಣವಾಗಿ ಗುಣಮಾಡುವ ವಿಧಾನಗಳು ಮುಂತಾದವುಗಳ ಕುರಿತು ಮಾಹಿತಿ ನೀಡಲಾಗುವುದು. ಆಸಕ್ತರು ಕ್ಯಾನ್ಸರ್ ವೈದ್ಯಕೀಯ ಜಾಗೃತ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೋ.ನಂ: Tel:+919449193801, tel:+919448679225 ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.