Slide
Slide
Slide
previous arrow
next arrow

ಅಂಕೋಲಾ ರೂರಲ್ ರೋಟರಿ ಸಂಸ್ಥೆಯಿಂದ ಬೋಳೆ ಶಾಲೆ ದತ್ತು ಸ್ವೀಕಾರ

300x250 AD

ಅಂಕೋಲಾ : ಪಟ್ಟಣದ ನಾಡವರ ಸಮುದಾಯದ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಪ್ ಅಂಕೋಲಾ ರೂರಲ್‌ನ ನೂತನ ಅಧ್ಯಕ್ಷ ಹರ್ಷಾ ಜಿ. ನಾಯಕರವರು ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೋಳೆಯನ್ನು ಶೈಕ್ಷಣಿಕ ಹಾಗೂ ಭೌತಿಕ ಪ್ರಗತಿಗಾಗಿ ಈ ವರ್ಷ ದತ್ತಕ ಪಡೆಯುವುದಾಗಿ ಘೋಷಿಸಿದರು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೋಳೆಯು ಗ್ರಾಮೀಣ ಪ್ರದೇಶದ ಶಾಲೆಯಾಗಿದ್ದು ಕಳೆದ 75 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಾ ಬಂದಿರುವ ಸರಕಾರಿ ಶಾಲೆಯಾಗಿರುತ್ತದೆ. ಈ ಶಾಲೆಯಲ್ಲಿ ಪರಿಶಿಷ್ಟ ಜಾತಿ ಜನಾಂಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಉತ್ತಮವಾದ ಶೈಕ್ಷಣಿಕ ಪರಿಸರವಿರುತ್ತದೆ. ಶಾಲಾ ಶೈಕ್ಷಣಿಕ ಬಲವರ್ಧನೆಗಾಗಿ ಇನ್ನಷ್ಟು ಶೈಕ್ಷಣಿಕ ಹಾಗೂ ಭೌತಿಕ ಸೌಲಭ್ಯಗಳ ಅವಶ್ಯಕತೆ ಇರುತ್ತವೆ.

300x250 AD

ಶಾಲಾ ದತ್ತು ಯೋಜನೆಯಡಿ ರೂರಲ್ ರೋಟರಿ ಸಂಸ್ಥೆ ಅಂಕೋಲಾ ಸ್ವೀಕರಿಸಿಕೊಂಡು ವಿದ್ಯಾರ್ಥಿಗಳ ಹಾಗೂ ಶಾಲೆಯ ಸಮಗ್ರ ಉನ್ನತಿ ಕರಣಕ್ಕೆ ತಮ್ಮ ಅಮೂಲ್ಯವಾದ ಸಹಕಾರವನ್ನು ನೀಡಲು ಒಪ್ಪಿದ ಬಗ್ಗೆ ಶಾಲಾ ಮುಖ್ಯಾಧ್ಯಾಪಕ ಜಗದೀಶ ಜಿ. ನಾಯಕ ಹೊಸ್ಕೇರಿ, ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಶ್ವೇತಾ ಪ್ರಶಾಂತ ಆಗೇರ, ಶಾಲಾ ಎಸ್.ಡಿ.ಎಮ್.ಸಿ. ಸದಸ್ಯರು, ಊರ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top