• Slide
  Slide
  Slide
  previous arrow
  next arrow
 • ವಡೇರ ಮಠಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ: ಜಿಎಸ್‌ಬಿ ಸಮಾಜದ ವತಿಯಿಂದ ಸನ್ಮಾನ

  300x250 AD

  ಭಟ್ಕಳ: ಇಲ್ಲಿನ ಜಿಎಸ್‌ಬಿ ಸಮಾಜದ ವತಿಯಿಂದ ಮೀನುಗಾರಿಕೆ ಹಾಗೂ ಬಂದರು ಸಚಿವರಾದ ಮಂಕಾಳ ಎಸ್ ವೈದ್ಯ ಅವರನ್ನು ಸಮಾಜದ ಅಧ್ಯಕ್ಷ ಸುಬ್ರಾಯ ದೇವಿದಾಸ ಕಾಮತ ಹಾಗೂ ಹತ್ತು ಸಮಸ್ತರು ಸನ್ಮಾನಿಸಿ ಗೌರವಿಸಿದರು.

  ಪಟ್ಟಣದ ವಡೇರ ಮಠಕ್ಕೆ ಅಧಿಕಮಾಸದ ನಿಮಿತ್ತ ನಡೆದ ವಿಶೇಷ ಪೂಜೆಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪಾಲ್ಗೊಂಡಿದ್ದರು.
  ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಹತ್ತು ಸಮಸ್ತರು ಹಾಗೂ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ ಗೌರವಿಸಿದರು. ವೆ.ಮೂ. ಕಿಶೋರ ಭಟ್ ಸಚಿವರ ಪರವಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿದರು.

  ನಂತರ ಮಾತನಾಡಿದ ಸಚಿವ ಮಂಕಾಳ ವೈದ್ಯ ಸಮಾಜದ, ನಾಡಿನ ಅಭಿವೃದ್ಧಿಗೆ ಜಿಎಸ್‌ಬಿ ಸಮಾಜದ ಗಣ್ಯರ ಕೊಡುಗೆ ಮಹತ್ತರವಾದ್ದದಾಗಿದೆ. ನಿಮ್ಮೊಂದಿಗೆ ಸದಾ ತಾನು ಬೆನ್ನೆಲುಬಾಗಿ ನಿಂತು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

  300x250 AD

  ಈ ಸಂಧರ್ಭದಲ್ಲಿ ಸಮಾಜದ ಪ್ರಮುಖರಾದ ನಾಗೇಶ ಕಾಮತ, ನಾಗೇಶ ಪೈ, ಅಚ್ಯುತ್ ಕಾಮತ, ಕೃಷ್ಣಾನಂದ ಪ್ರಭು, ಉದಯ ಪ್ರಭು, ಕಲ್ಪೇಶ ಪೈ, ಪ್ರಾಂಶುಪಾಲ ಶ್ರೀನಾಥ ಪೈ, ನಾಗೇಶ ಭಟ್, ಡಾ. ಸವಿತಾ ಕಾಮತ, ಪದ್ಮನಾಭ ಪೈ, ಪ್ರಸನ್ನ ಪ್ರಭು, ಅನಿಲ ಭಟ್, ರಾಮಕೃಷ್ಣ ಭಟ್ ಇತರರು ಇದ್ದರು. ರಾಮು ಕಾಮತ ದಂಪತಿಗಳು ಸತ್ಯನಾರಾಯಣ ಪೂಜೆ ಸೇವೆ ಸಲ್ಲಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top