Slide
Slide
Slide
previous arrow
next arrow

ಬಹಿಷ್ಕಾರದಂತಹ ಘಟನೆ ಇಲ್ಲ: ಅಂಬಿಗ ಸಮಾಜದ ಸ್ಪಷ್ಟನೆ

300x250 AD

ಹೊನ್ನಾವರ: ತಾಲೂಕಿನ ಕರಿಕುರ್ವಾ ಗ್ರಾಮದ ಅಂಬಿಗ ಸಮಾಜದವರಿಂದ ಬಹಿಷ್ಕಾರದಂತಹ ಯಾವುದೇ ಘಟನೆಯು ಇಲ್ಲ ಎಂದು ಅಂಬಿಗ ಸಮಾಜದ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಮಾಜದ ಮುಖಂಡರು, ನಾವು ಇತರೆ ಸಮಾಜದವರಂತೆ ಎಲ್ಲರೊಂದಿಗೆ ಪ್ರೀತಿಯಿಂದ ಧಾರ್ಮಿಕ ಆಚರಣೆಯಂತಹ ಹಲವು ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಲಕ್ಷ್ಮೀ ಬೋಳ ಅಂಬಿಗ ಈ ಕುಟುಂಬವನ್ನು ಸಮಾಜದಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿಗೆ ದೂರು ನೀಡಲು ಹೋಗಿರುವುದು ಮಾಧ್ಯಮದಲ್ಲಿ ವರದಿಯಾಗಿದೆ. ಈ ಘಟನೆ ಸತ್ಯಕ್ಕೆ ದೂರವಾಗಿದ್ದು, ನಮ್ನಲ್ಲಿ ಅಂತಹ ಯಾವುದೇ ಘಟನೆ ನಡೆದಿರುದಿರುದಿಲ್ಲ.

ಕೆಲವರು ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಜುಲೈ 1ರ 2022ರಂದು ಇದೇ ರೀತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಾವೆಲ್ಲರೂ ಠಾಣಿಯಲ್ಲಿ ಹೇಳಿಕೆ ನೀಡಿದ್ದರೂ ಇಂತಹ ಆರೋಪ ಮುಂದುವರೆಸಿದ್ದಾರೆ. ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಪರಿಶೀಲನೆ ನಡೆಸಬಹುದು. ಇಂತಹ ಯಾವುದೇ ಘಟನೆಯು ನಡೆಯುತ್ತಿಲ್ಲ ಎಂದು ಸಮಾಜದ ಮುಖಂಡರು ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಧರ್ಮ ರಾಮ ಅಂಬಿಗ, ಕೇಶವ ಅಂಬಿಗ, ದಿನೇಶ ಅಂಬಿಗ, ಧರ್ಮ ಎನ್. ಅಂಬಿಗ, ಲೊಕೇಶ ಅಂಬಿಗ, ರವಿ ಅಂಬಿಗ, ಯಶವಂತ ಅಂಬಿಗ, ಮೋಹನ ಅಂಬಿಗ, ಬಾಬು ಅಂಬಿಗ, ರಾಮ ಅಂಬಿಗ, ಗಣಪತಿ ಅಂಬಿಗ, ವಾಮನ ಅಂಬಿಗ ಇದ್ದರು.

300x250 AD
Share This
300x250 AD
300x250 AD
300x250 AD
Back to top