• Slide
    Slide
    Slide
    previous arrow
    next arrow
  • ಪ್ರವೃತ್ತಿಯಾಗಿ ಸ್ವೀಕರಿಸಿದವರಿಂದ ಪತ್ರಿಕಾ ರಂಗಕ್ಕೆ ಉತ್ತಮ ಕೊಡುಗೆ: ಹರಿಪ್ರಕಾಶ ಕೋಣೆಮನೆ

    300x250 AD

    ಯಲ್ಲಾಪುರ: ಯಾರೂ ಪತ್ರಿಕೋದ್ಯಮವನ್ನು ವೃತ್ತಿಗಿಂತ ಪ್ರವೃತ್ತಿಯಾಗಿ ಸ್ವೀಕರಿಸುತ್ತಾರೆ, ಅವರಿಂದ ಪತ್ರಿಕಾ ರಂಗಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ದೊರಕುತ್ತದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ವಿಸ್ತಾರ ನ್ಯೂಸ್ ಮಿಡಿಯಾ ಸಿಇಓ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶಕೋಣೆಮನೆ ಹೇಳಿದರು.

    ಅವರು ಶನಿವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮದ್ ಗಂಗಾಧರೇoದ್ರ ಸರಸ್ವತಿ ಸಭಾಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕ ಹಾಗೂ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪತ್ರಿಕೋದ್ಯಮಕ್ಕೆ ಉತ್ತರಕನ್ನಡ ಜನತೆಯ ಕೊಡುಗೆ ಬಹಳಷ್ಟಿದೆ. ಇಲ್ಲಿಯವರು ಪತ್ರಿಕೊದ್ಯಮವನ್ನು ವೃತ್ತಿಯಾಗಿಸಿಕೊಂಡವರಲ್ಲ. ನಂತರ ವೃತ್ತಿಯಾಗಿಸಿಕೊಂಡು ಯಶಸ್ಸು ಕಂಡಿದ್ದಾರೆ. ಪತ್ರಕರ್ತನಾದವನು ಸತ್ಯದ ಶೋಧಕನಾಗಿರಬೇಕು, ತಾನು ಅನುಭವಿಸಿ ಅಂತಿಮ ಸತ್ಯ ಏನು ಎಂದು ಅರ್ಥ ಮಾಡಿಕೊಂಡು ವರದಿ ಮಾಡಬೇಕು. ಅಂತವರನ್ನು ಪತ್ರಕರ್ತರೆನ್ನಬಹುದು. ಸಾಮಾಜಿಕ ಆಗು ಹೋಗುಗಳಿಗೆ ಆತ ಕಾರ್ಯಕರ್ತನಾಗಿರಬೇಕು, ಸಂಚಾರಿಯಾಗಿರಬೇಕು, ಜನರ ಜೊತೆ ಸಧಾ ಸಂಪರ್ಕದಲ್ಲಿರಬೇಕು, ಪತ್ರಕರ್ತರಿಗೆ ತಮ್ಮ ಸಂಸ್ಕೃತಿ ನೆಲದ ಬಗ್ಗೆ ಅಭಿಮಾನ ಇರಬೇಕು ಎಂದು ಹೇಳಿದರು.

    ‘ಪತ್ರಿಕೋದ್ಯಮದಲ್ಲಿ ಇಂದಿನ ಸವಾಲುಗಳು’ ವಿಷಯದ ಕುರಿತು ಉಪನ್ಯಾಸ ನೀಡಿದ ವಿಜಯವಾಣಿ ದೈನಿಕ ಸುದ್ದಿ ಸಂಪಾದಕ ಹಾಗೂ ವಿಶ್ವದರ್ಶನ ಮಿಡಿಯಾ ಸ್ಕೂಲ್‌ನ ನಿಯೋಜಿತ ಪ್ರಾಂಶುಪಾಲರಾದ ನಾಗರಾಜ ಇಳೇಗುಂಡಿ, ಹಿಂದಿನಿoದಲೂ ಮುದ್ರಣ ಮಾಧ್ಯಮ ಮನುಷ್ಯನ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಇಂದು ಮುದ್ರಣ, ಡಿಜಿಟಲ್ ಹಾಗೂ ಟಿವಿ ಮಾಧ್ಯಮಗಳಿವೆ. ಡಿಜಿಟಲ್ ಹಾಗೂ ಟಿವಿಗಳಲ್ಲಿ ಕ್ಷಣಾರ್ದದಲ್ಲಿ ಸುದ್ದಿ ಪ್ರಕಟವಾಗುತ್ತದೆ. ಮರುದಿನ ಪತ್ರಿಕೆಯಲ್ಲಿ ಯಾರೂ ಓದುತ್ತಾರೆ ಇದು ಮುದ್ರಣ ಮಾಧ್ಯಮದ ಸವಾಲಾಗಿದೆ. ಬಹಳಷ್ಟು ಪತ್ರಿಕೆಗಳು ಮುಚ್ಚುತ್ತಿವೆ. ಆದರೂ ಕೂಡ, ಮುದ್ರಣ ಮಾಧ್ಯಮ ತರಾತುರಿಯಿಂದ ಸುದ್ದಿ ನೀಡುವ ಬದಲು, ಸತ್ಯದ ಅನ್ವೇಷಣೆಯ ಸುದ್ದಿ, ಪ್ರಕಟಿಸುತ್ತಿರುವುದು ಹಲವಾರು ಸವಾಲುಗಳ ಮಧ್ಯ ಜನರ ವಿಶ್ವಾಸಗಳಿಸಲು ಸಾಧ್ಯವಾಗಿದೆ ಎಂದು ಹೇಳಿದ ಅವರು, ಪತ್ರಕರ್ತ ರಾಜಕೀಯ, ನ್ಯಾಯಾಂಗ, ಸಾಮಾಜಿಕ ಹಾಗೂ ಪ್ರಚಲಿತ ವಿದ್ಯಮಾನಗಳ ಜ್ಞಾನ ಹೊಂದಿರಬೇಕು. ಓದುಗರಿಗೆ ವಿಶ್ಲೇಷಣೆ ಒಳ ನೋಟಗಳನ್ನು ಕೊಟ್ಟಾಗ ಮಾತ್ರ ಅಸ್ಥಿತ್ವದಲ್ಲಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕದ ಅಧ್ಯಕ್ಷ ಶಂಕರ ಭಟ್ ತಾರೀಮಕ್ಕಿ ಮಾತನಾಡಿ, ವಾಟ್ಸಪ್ ಹಾಗೂ ಇನ್ನಿತರ ಮೂಲಗಳಿಂದ ಸುದ್ದಿ ಸಿಗುತ್ತಿರುವುದರಿಂದ ಇಂದು ವರದಿಗಾರರು ಸ್ಥಳಕ್ಕೆ ತೆರಳಿ ವರದಿ ಮಾಡಲು ಆಲಸಿಗಳಾಗುತ್ತಿದ್ದಾರೆ. ನಾವು ಬೇರೆಯವರ ಬಗ್ಗೆ ಬರೆಯುವಾಗ, ನಮ್ಮ ಬಗ್ಗೆ ನಾವು ಎನು ಇದ್ದೇವೆ ಎಂದು ಮೊದಲು ಅರಿತುಕೊಳ್ಳಬೇಕು. ಇಂದು ಪ್ರಶಸ್ತಿಗಳು ಕೂಡ ತಮಗೆ ಬೇಕಾದರವರಿಗೆ ನೀಡುವ ವ್ಯವಸ್ಥೆ ಆಗುತ್ತಿರುವುದು ವಿಪರ್ಯಾಸವಾಗಿದೆ ಎಂದರು.
    ಮಲೇನಾಡು ಸೊಸೈಟಿಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಯಕ್ಷಗಾನ ತಾಳಮದ್ದಲೆ ಅರ್ಥದಾರಿಗಳಾದ ಎಮ್.ಎನ್.ಹೆಗಡೆ, ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ವೈದ್ಯರಾದ ಡಾ.ಸುಚೇತಾ ಮದ್ಗುಣಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ಸಿಬಿಎಸ್‌ಸಿ ಪ್ರಮುಖರಾದ ಮಾದೇವಿ ಭಟ್ ಮುಂತಾದವರು ಭಾಗವಹಿಸಿದ್ದರು. ಕೆಜೆಯು ಉಪಾಧ್ಯಕ್ಷ ವಿ.ಜಿ.ಗಾಂವ್ಕರ ಸ್ವಾಗತಿಸಿದರು. ಕಾರ್ಯದರ್ಶಿ ಕೇಬಲ್ ನಾಗೇಶ ನಿರೂಪಿಸಿದರು. ರಾಜ್ಯ ಸಮಿತಿ ಸದಸ್ಯ ನಾಗರಾಜ ಮದ್ಗುಣಿ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top