ಹೊನ್ನಾವರ: ಪಟ್ಟಣದ ಪ್ರತಿಭೊದಯದಲ್ಲಿ ಜುಲೈ 30ರಂದು ರವಿವಾರ 4-30 ಗಂಟೆಗೆ ಕ್ರೈಸ್ತ ಸಮುದಾಯದ ಪರವಾಗಿ ಮಿನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚೀವರಾದ ಮಂಕಾಳು ಎಸ್. ವೈದ್ಯರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರವಾರ ಧರ್ಮಪ್ರಾಂತ್ಯದ ಆಡಳಿತಾಧಿಕಾರಿಗಳಾದ ಅತಿವಂದನೀಯ ಬಿಷಪ್ ಡಾ. ಡೆರೆಕ ಫರ್ನಾಂಡಿಸ್ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಗಾಟನೆಯನ್ನು ಸಚಿವ ಮಂಕಾಳ ವೈದ್ಯ ನೇರವೇರಿಸಲಿದ್ದು, ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ನಿವೇದಿತ ಆಳ್ವಾ ಆಗಮಿಸಲಿದ್ದಾರೆ.
ವೇದಿಕೆಯಲ್ಲಿ ಮಾರ್ಥೋಮಾ ಮಿಷನ್ ಇದರ ಮ್ಯಾನೇಜರ್ ವಂದನೀಯ ಫಾ| ಲಿಜೋ ಚಾಕೊ ಹೊನ್ನಾವರ ಮಿಷನ್ ಕಾರ್ಯದರ್ಶಿ ವಂದನೀಯ ಫಾ| ಅಶೋಕ ಜೋಸೆಫ್, ಐ.ಎಫ್.ಕೆ.ಸಿ.ಎ ಅಧ್ಯಕ್ಷರಾದ ಸಾಮ್ಸನ್ ಡಿಸೋಜಾ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಆಲ್ಬರ್ಟ ಡಿಕೋಸ್ತಾ ಉಪಸ್ಥಿತಿ ವಹಿಸಲಿದ್ದಾರೆ. ಕ್ಯಾಥೋಲಿಕ್ ಎಸೋಸಿಯೆಸನ್ ಕಾರವಾರ ಧರ್ಮಪ್ರಾಂತ್ಯ ಮತ್ತು ಉತ್ತರ ಕನ್ನಡ ಜಿಲ್ಲಾ ಕ್ರೈಸ್ತ ಸಂಘ-ಸAಸ್ಥೆಗಳ ಒಕ್ಕೂಟ ಹೊನ್ನಾವರ ಜಂಟಿಯಾಗಿ ಆಯೋಜಿಸಲಾಗಿದೆ ಎಂದರು. ಒಕ್ಕೂಟದ ಗೌರವಾಧ್ಯಕ್ಷ ಜೋರ್ಚ ಫರ್ನಾಂಡಿಸ್, ಸಿ.ಎ.ಡಿ.ಕೆ. ಅಧ್ಯಕ್ಷ ಆಸಿಸ್ ಗೊನ್ಸಾಲಿಸ್ ಮುಖಂಡರಾದ ಲೂಕಾಸ ಫನಾಂಡಿಸ್, ಸ್ಟೇಫನ್ ರೋಡ್ರಿಗಿಸ್ ಹೆನ್ರಿ ಲೀಮಾ, ಜೇಕಬ ಫರ್ನಾಂಡಿಸ್ ಉಪಸ್ಥಿತರಿದ್ದರು.