ಹೊನ್ನಾವರ: 2023-24ನೇ ಸಾಲಿನ ಕೃಷಿ ಇಲಾಖೆಯ ಕೃಷಿ ಪ್ರಶಸ್ತಿಗೆ ತಾಲೂಕಿನ ಭತ್ತ ಬೆಳೆದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಪುನೀತಾ ಎಸ್.ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿದಾರ ಸ್ವತಃ ಬೇಸಾಯದಲ್ಲಿ ತೊಡಗಿರುವ ಕ್ರಿಯಾಶೀಲ ಕೃಷಿಕನಾಗಿರಬೇಕು ಅಥವಾ ಸ್ವಂತ ಜಮೀನು ಹೊಂದಿರದಿದ್ದರೂ ಬೇಸಾಯದಲ್ಲಿ ತೊಡಗಿರುವ ಜಮೀನು ಮಾಲೀಕರಿಂದ ಸಾಮಾನ್ಯ ವ್ಯವಹಾರಿಕ ಅಧಿಕಾರಿ ಹೊಂದಿದ್ದ ಪಕ್ಷದಲ್ಲಿ (ಭೂಸುಧಾರಣೆಯ ಕಾಯ್ದೆಯ ನಿಯಮಗಳಿಗೆ ಒಳಪಟ್ಟು) ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಮತ್ತು ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಕನಿಷ್ಠ ವಿಸ್ತೀರ್ಣ 1 ಎಕರೆ ಇರಬೇಕು. ಪಹಣಿ ಪತ್ರಿಕೆ, ಶುಲ್ಕ ಪಾವತಿಸಿದ್ದಕ್ಕೆ ಚಲನ್, ಪ.ಜಾ./ಪ.ಪಂ. ರೈತರಾದಲ್ಲಿ ಜಾತಿ ಪ್ರಮಾಣ ಪತ್ರ, ರೈತರ ಛಾಯಾ ಚಿತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಎಲ್ಲಾ ಮಟ್ಟಗಳಿಗೂ (ರಾಜ್ಯ/ತಾಲೂಕು/ಜಿಲ್ಲಾ) ಅನ್ವಯಿಸುವಂತೆ ಪ.ಜಾ./ಪ.ಪಂ. ರೈತರಿಗೆ 25ರೂ. ಹಾಗೂ ಸಾಮಾನ್ಯ ವರ್ಗದ ರೈತರಿಗೆ 100ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ತಾಲೂಕಿನಲ್ಲಿ ಒಟ್ಟು 15 ಕೃಷಿ ಪ್ರಶಸ್ತಿ ಅರ್ಜಿಗಳು ನೋಂದಾವಣಿ ಮಾಡಲು ಅವಕಾಶವಿದ್ದು ಆಸಕ್ತ ರೈತರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಸೂಕ್ತ ದಾಖಲೆಗಳೊಂದಿಗೆ ಹಾಗೂ ಕ್ಷೇತ್ರ ಚಿತ್ರಗಳ ಸಹಿತ ಆಗಸ್ಟ. 31 ರೊಳಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಹೊನ್ನಾವರ (ಮೊ.ನಂ.tel:+918277933041) ಹಾಗೂ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಹಡಿನಬಾಳ (ಮೊ.ನಂ.Tel:+918277933037) ಹಾಗೂ ರೈತ ಸಂಪರ್ಕ ಕೇಂದ್ರ, ಮಂಕಿ ಇಲ್ಲಿ ಸಂಪರ್ಕಿಸಲು ಅವರು ತಿಳಿಸಿದ್ದಾರೆ.