Slide
Slide
Slide
previous arrow
next arrow

ಅಂಬೇಡ್ಕರ್ ವಸತಿ ಯೋಜನೆಯ ಆದೇಶ ಪತ್ರ ವಿತರಣೆ

300x250 AD

ಗೋಕರ್ಣ: ಗೋಕರ್ಣ ಗ್ರಾಮ ಪಂಚಾಯತ ವಿಸ್ತಾರವಾಗಿದ್ದು, ಇಲ್ಲಿಯ ಉದ್ಯಮಗಳು ಕೂಡ ಸಾಕಷ್ಟಿವೆ. ಹೀಗಾಗಿ ಇಲ್ಲಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪಂಚಾಯತದವರಿಗೂ ಕೂಡ ಕಷ್ಟವಾಗುತ್ತದೆ. ಹೀಗಾಗಿ ಇಲ್ಲಿಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪಟ್ಟಣ ಪಂಚಾಯತ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಈಗಾಗಲೇ ಸಾಕಷ್ಟು ಶ್ರಮ ವಹಿಸಿದ್ದು, ಆದಷ್ಟು ಬೇಗ ಇದನ್ನು ಜಾರಿಗೊಳಿಸಲು ಸಂಬoಧಿಸಿದವರ ಜತೆ ಚರ್ಚಿಸಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಇಲ್ಲಿಯ ನೆಲಗುಣಿಯ ಕಾಶಿ ವಿಶ್ವೇಶ್ವರ ಸಭಾಭವನದಲ್ಲಿ ಗೋಕರ್ಣ, ಹನೇಹಳ್ಳಿ, ನಾಡುಮಾಸ್ಕೇರಿ ಗ್ರಾ.ಪಂ. ವ್ಯಾಪ್ತಿಯ ಅಂಬೇಡ್ಕರ ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮನೆಯನ್ನು ನನ್ನ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಂಜೂರಿ ಮಾಡಿಸಲಾಗಿತ್ತು. ಈಗಾಗಲೇ ಹಲವೆಡೆ ಮಂಜೂರಾತಿ ಪತ್ರ ವಿತರಿಸಿದ್ದು, ಈ ಮೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 100 ಫಲಾನುಭವಿಗಳಿಗೆ ಆದೇಶ ಪತ್ರ ನೀಡುತ್ತಿದ್ದೇನೆ. ಎಲ್ಲರೂ ತಮ್ಮ ವಸತಿಗಳನ್ನು ನಿರ್ಮಿಸಿಕೊಂಡು ಬದುಕಬೇಕು ಎನ್ನುವುದು ನಮ್ಮ ಸರಕಾರದ ಆಶಯವಾಗಿತ್ತು.

300x250 AD

ಈ ಸಂದರ್ಭದಲ್ಲಿ ಗೋಕರ್ಣ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಮಾಜಿ ಉಪಾಧ್ಯಕ್ಷ ಶಾರದಾ ಮೂಡಂಗಿ, ಹನೇಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಭಾರತಿ ಗೌಡ, ಮಾಜಿ ಉಪಾಧ್ಯಕ್ಷ ಭರತ ಗಾಂವಕರ, ನಾಡುಮಾಸ್ಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಧನಶ್ರೀ ಅಂಕೋಲೆಕರ, ಪಿಡಿಓ ಸೇರಿದಂತೆ ಗ್ರಾ.ಪಂ. ಸದಸ್ಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top