• Slide
    Slide
    Slide
    previous arrow
    next arrow
  • ಜು.31ಕ್ಕೆ ಐತಿಹಾಸಿಕ ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ: ಏಕಕಾಲದಲ್ಲಿ 400 ಮಿಕ್ಕಿ ಹಳ್ಳಿಗಳಲ್ಲಿ ಕಾರ್ಯಕ್ರಮ

    300x250 AD

    ಶಿರಸಿ: ಅರಣ್ಯವಾಸಿಗಳಿಂದ ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ 101 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 400ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಜುಲೈ 31, ಮುಂಜಾನೆ 10 ಗಂಟೆಗೆ ಜಿಲ್ಲಾದ್ಯಂತ ಏಕಕಾಲದಲ್ಲಿ ಗಿಡ ನೆಡುವ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

    ಅವರು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಜುಲೈ 31 ರಂದು ಜಿಲ್ಲಾದ್ಯಂತ ಲಕ್ಷ ವೃಕ್ಷ ಅಭಿಯಾನದ ಕಾರ್ಯಕ್ರಮದ ಮಾಹಿತಿ ಬಿಡುಗಡೆಗೊಳಿಸಿ ಮಾತನಾಡಿದರು.

    ಅರಣ್ಯವಾಸಿಗಳು ಅರಣ್ಯದ ಅವಿಭಾಜ್ಯ ಅಂಗ. ಅರಣ್ಯವನ್ನು ರಕ್ಷಿಸಿ, ಸಂರಕ್ಷಿಸುವುದು ಜವಾಬ್ದಾರಿ ಅರಣ್ಯವಾಸಿಗಳದ್ದಾಗಿರುವುದರಿಂದ ಅರಣ್ಯವಾಸಿಗಳು ಪರಿಸರ ಅಭಿವೃದ್ಧಿ ದಿಶೆಯಲ್ಲಿ, ವಾಸ್ತವ್ಯಕ್ಕಾಗಿ ಅತಿಕ್ರಮಿಸಿದ ಪ್ರತಿ ಕುಟುಂಬದವರು ಗಿಡ ನೆಡುವ ಅಭಿಯಾನದಲ್ಲಿ ಪಾಲ್ಗೊಂಡು ಅರಣ್ಯ ಸಾಂದ್ರತೆಯ ಮಟ್ಟ ಹೆಚ್ಚಿಸುವಲ್ಲಿ ಪಾಲ್ಗೊಂಡು ಸಕ್ರಿಯವಾಗಿ ಭಾಗವಹಿಸಬೇಕೆಂದು ರವೀಂದ್ರ ನಾಯ್ಕ ಅರಣ್ಯ ಅತಿಕ್ರಮಣದಾರರಿಗೆ ಕರೆ ನೀಡಿದ್ದಾರೆ.

    1 ಲಕ್ಷಕ್ಕೂ ಮಿಕ್ಕಿ ಗಿಡ-165 ಗ್ರಾ.ಪಂ ವ್ಯಾಪ್ತಿಯಲ್ಲಿ :
    ಜಿಲ್ಲಾದ್ಯಂತ 1 ಲಕ್ಷಕ್ಕೂ ಮಿಕ್ಕಿ ಗಿಡ ನೆಡುವ ಕಾರ್ಯಕ್ರಮವನ್ನ ವಿವಿಧ ತಾಲೂಕುಗಳ 165 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜುಲೈ 31 ರಿಂದ ಅಗಸ್ಟ 14 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

    300x250 AD

    ಏಕಕಾಲದಲ್ಲಿ 10 ಸಾವಿರ ಅತಿಕ್ರಮಣದಾರರು:
    ಗಿಡ ನೆಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ 400 ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಜುಲೈ 31 ರಂದು ಏಕಕಾಲದಲ್ಲಿ ಜಿಲ್ಲಾದ್ಯಂತ 10 ಸಾವಿರ ಅರಣ್ಯ ಅತಿಕ್ರಮಣದಾರರು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆಯು ದಾಖಲಾರ್ಹವಾಗಿರುತ್ತದೆ ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಇಮಾಮ್‌ಸಾಬ ಗೌಡಳ್ಳಿ, ರಾಜು ಅರೇರ್ ನರೇಬೈಲ್, ನೇಹರೂ ನಾಯ್ಕ ಬಿಳೂರು, ದೇವರಾಜ ಬಂಡಲ, ಶಿರಸಿ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ, ದುಗ್ಗು ಮರಾಠಿ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top