• Slide
  Slide
  Slide
  previous arrow
  next arrow
 • ರೋಟರಿಯೊಂದಿಗೆ ಸಮಾಜಸೇವೆಗೆ ಬದ್ಧ: ದಿನಕರ ಶೆಟ್ಟಿ

  300x250 AD

  ಕುಮಟಾ: ಇಲ್ಲಿಯ ರೋಟರಿ ಕ್ಲಬ್ ತನ್ನ ವಾರದ ಸಭೆಯಲ್ಲಿ ವಾರದ ಅತಿಥಿಗಳನ್ನಾಗಿ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಹಾಗೂ ಅವರ ಸಹಧರ್ಮಿಣಿ ಉಷಾ ಶೆಟ್ಟಿ ಅವರನ್ನು ಆಹ್ವಾನಿಸಿ ತನ್ನ ವಾರ್ಷಿಕ ಯೋಜನೆಗಳಿಗೆ ಸಹಕರಿಸುವಂತೆ ಕೋರಿತು.
  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರಾಜಕೀಯ ಸ್ವಾರ್ಥತನದಿಂದ ಕೂಡಿದ್ದರೆ, ರೋಟರಿಯಂತಹ ಸಂಸ್ಥೆಗಳು ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸಮಾಜೋಪಯೋಗಿ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವುದು ಕುಮಟಾದಲ್ಲಿ ರೋಟರಿ ಆರಂಭವಾದ ದಿನಗಳಿಂದಲೂ ನಡೆದು ಬಂದಿರುವುದು ಸಂತಸದ ವಿಷಯವೆಂದರು.

  ರೋಟರಿ ಅಧ್ಯಕ್ಷ ಎನ್.ಆರ್.ಗಜು ತಮ್ಮ ಯೋಚನೆಯ ಮಣಕಿ ಮೈದಾನದ ಬಳಿಯಿರುವ ಸ್ಮಶಾನವನ್ನು ಆಧುನೀಕರಿಸುವ ಯೋಜನೆ ಪ್ರಸ್ತಾಪಿಸಿದಾಗ, ರೋಟರಿಯ ಅನೇಕ ಯೋಜನೆಗಳಿಗೆ ತಾವು ಈ ಹಿಂದೆ ನೀಡಿದಂತೆ ಸಹಾಯಹಸ್ತವನ್ನು ನೀಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. ರಾಜಕೀಯೇತರ ಸಂಸ್ಥೆ ಕೊಡುವ ಆತ್ಮತೃಪ್ತಿಯನ್ನು ಬಣ್ಣಿಸುತ್ತಲೇ, ರಾಜಕೀಯ ಕ್ಷೇತ್ರದಲ್ಲಿ ಕಂಡು0ಡ ಅನೇಕ ರಸನಿಮಿಷಗಳನ್ನು ಸಲ್ಲಾಪಿಸುತ್ತಾ, ಸಭೆಯನ್ನು ನಗೆಗಡಲಲ್ಲಿ ಮುಳುಗಿಸಿದರು.

  300x250 AD

  ಪ್ರಾರಂಭದಲ್ಲಿ ರೋಟರಿ ಧ್ಯೇಯ ವಾಕ್ಯವನ್ನು ಜಯಶ್ರೀ ಕಾಮತ ವಾಚಿಸಿದರು. ನಿಖಿಲ್ ಕ್ಷೇತ್ರಪಾಲ ಪರಿಚಯಿಸಿದರು. ಕಾರ್ಯದರ್ಶಿ ರಾಮದಾಸ ಗುನಗಿ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು. ರೋಟರಿಯ ಉಪ ಪ್ರಾಂತಪಾಲ ವಸಂತ ರಾವ್, ಕೋಶಾಧ್ಯಕ್ಷ ಸಂದೀಪ ನಾಯ್ಕ, ರೋಟೇರಿಯನ್ನರಾದ ಡಾ.ಡಿ.ಡಿ.ನಾಯಕ, ಎಂ.ಬಿ.ಪೈ, ಆರ್.ಟಿ.ಹೆಗಡೆ, ವಿನಾಯಕ ಬಾಳೇರಿ, ಸತೀಶ ನಾಯ್ಕ, ಚೇತನ ಶೇಟ್, ಅತುಲ್ ಕಾಮತ, ಪವನ ಶೆಟ್ಟಿ, ಗಣೇಶ ನಾಯ್ಕ, ಫ್ರಾಂಕಿ ಫರ್ನಾಂಡಿಸ್, ವಸಂತ ಶಾನಭಾಗ, ಕಿರಣ ನಾಯಕ, ಏನ್.ವೀಣಾ ಶಾನಭಾಗ, ದೀಪಾ ನಾಯಕ, ಅನೆಟ್ ವಿಷ್ಣು ಕಾಮತ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಸಕರ ಜನ್ಮದಿನವನ್ನು ಉಷಾ ಶೆಟ್ಟಿಯವರು ಆರತಿ ಬೆಳಗುವುದರೊಂದಿಗೆ ರೋಟರಿ ಕುಟುಂಬ ಸೇರಿ ಕುಶಲವಾಗಿ ಆಚರಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top